ಬೇಸನ್ ಉಂಡೆ
– ಸವಿತಾ.
ಏನೇನು ಬೇಕು?
- 2 ಲೋಟ – ಕಡಲೆ ಹಿಟ್ಟು
- 1 1/2 ಲೋಟ – ಸಕ್ಕರೆ ಪುಡಿ
- 1/2 ಲೋಟ – ತುಪ್ಪ
- 10 – ಗೋಡಂಬಿ
- 10 – ಒಣ ದ್ರಾಕ್ಶಿ
- 4 ಏಲಕ್ಕಿ
ಮಾಡುವ ಬಗೆ
- ಕಡಲೆಬೇಳೆ ಹುರಿದು ಗಿರಣಿಯಲ್ಲಿ ಬೀಸಿ ಹಿಟ್ಟು ಮಾಡಿಸಿ ಇಟ್ಟುಕೊಳ್ಳಿ.
- ಎರಡು ಚಮಚ ತುಪ್ಪದಲ್ಲಿ ಗೋಡಂಬಿ, ಒಣ ದ್ರಾಕ್ಶಿ ಸ್ವಲ್ಪ ಹುರಿದು ತೆಗೆದಿಡಿ.
- ತುಪ್ಪದಲ್ಲಿ ಕಡಲೆಹಿಟ್ಟು ಚೆನ್ನಾಗಿ ಹುರಿದು ಒಲೆ ಆರಿಸಿ ನಂತರ ಸಕ್ಕರೆ ಪುಡಿ ಮಾಡಿ ಸೇರಿಸಿ ಚೆನ್ನಾಗಿ ಕಲಸಿ.
- ಏಲಕ್ಕಿ ಪುಡಿ ಮಾಡಿ ಸೇರಿಸಿ, ಇನ್ನೊಮ್ಮೆ ಕಲಸಿ ಉಂಡೆ ಮಾಡಿ, ಗೋಡಂಬಿ ಒಣ ದ್ರಾಕ್ಶಿ ಹಾಕಿ ಉಂಡೆ ಕಟ್ಟಿ ಇಡಿ.
ಈಗ ರುಚಿಯಾದ ಬೇಸನ್ ಉಂಡೆ ಸವಿಯಿರಿ 🙂
ಇತ್ತೀಚಿನ ಅನಿಸಿಕೆಗಳು