ಟೈಮಿಲ್ಲ ಟೈಮಿಲ್ಲ ಯಾವುದಕ್ಕೂ ಟೈಮಿಲ್ಲ

– ಪದ್ಮನಾಬ.

ಟೈಮಿಲ್ಲ ಟೈಮಿಲ್ಲ ಟೈಮಿಲ್ಲ
ಟೈಮನ್ನು ನೋಡೋಕೆ ಟೈಮಿಲ್ಲ
ಕಂಪ್ಯೂಟರ್ ಇಂಟರ‍್ನೆಟ್ ಇದ್ರೂನು
ಇನ್‌ಟೈಮ್ ಕೆಲಸ ಮುಗಿಯೋದಿಲ್ಲ
ಬೈಕು ಸ್ಕೂಟಿ ಕಾರು ಎಲ್ಲ ಇದ್ರೂನು
ಇನ್‌ಟೈಮ್ ಎಲ್ಲೂ ಹೋಗೋಕ್ಕಾಗೋದಿಲ್ಲ

ಅಮೇರಿಕದಲ್ ಏನಾಗ್ತಿದೆ ಗೊತ್ತಿದೆ
ಪಕ್ಕದ ಬೀದಿಲೇನಾಗ್ತಿದೆ ಗೊತ್ತಿಲ್ಲ
ಟಿವಿ ಆಂಕರ‍್ಸ್ ಆಕ್ಟರ‍್ಸ್ ಗೊತ್ತು
ಪಕ್ಕದ್ಮನೆಯೋರ ಹೆಸರು ಗೊತ್ತಿಲ್ಲ
ಬಂದು ಬಳಗ ಎಲ್ಲಿ ಅಂತ ಗೊತ್ತಿಲ್ಲ
ಬಂದು ಹೋಗಿ ಮಾಡೋದಿಕ್ಕೆ ಟೈಮಿಲ್ಲ
ತಿಳಕೊಳ್ಳೋಕೆ ನಂಗೆ ಸ್ವಾಮಿ ಟೈಮಿಲ್ಲ

ಹಬ್ಬದಲ್ಲಿ ಹೋಳಿಗೆ ಚಕ್ಲಿ ಮಾಡದಿಲ್ಲ
ಸಂಕ್ರಾಂತಿಗೂ ಮನೇಲಿ ಎಳ್ಳು ಬೀರೋಲ್ಲ
ಅಂಗಡಿಯೋರ‍್ಗೆ ನಮ್ಮಕಶ್ಟ ಗೊತ್ತಲ್ಲ
ರೆಡಿಮೇಡ್ ಎಲ್ಲ ಅವನೇ ಕೊಡ್ತಾನಲ್ಲ
ಹಂಚೋದಿಕ್ಕೆ ನಂಗೆ ಸ್ವಾಮಿ ಟೈಮಿಲ್ಲ

ದಿನ ಪ್ರೆಶ್ಶಾಗಿ ಅಡಿಗೆ ತಿಂಡಿ ಮಾಡೋದಿಲ್ಲ
ನಿನ್ನೆ ಸಾಂಬಾರ್ ಚಟ್ನಿ ಪ್ರಿಡ್ಜಲ್ಲಿ ಇಡ್ತೀವಲ್ಲ
ಬಜನಾ ಮಂಡಳಿಗೆಲ್ಲ ನಾವು ಹೋಗ್ಬೇಕಲ್ಲ
ಪ್ರೆಶ್ಶಾಗ್ ಅಡಿಗೆ ಮಾಡೋಕೆ ಟೈಮಿಲ್ಲ

ಮೊಬೈಲಲ್ಲೇ ಮಕ್ಳು ಈಗ ಆಡ್ತಾರಲ್ಲ
ನಿಜವಾದ್ ಆಟ ಓಟ ಎಲ್ಲ ಮರೆತೋಯ್ತಲ್ಲ
ಸ್ಕೂಲು ಟ್ಯೂಶನ್ ಹೋಂವರ‍್ಕಿನ ಬರಾಟೆಲಿ
ಮಕ್ಕಳಿಗ್ ಆಟ ಆಡೋಕು ಟೈಮಿಲ್ಲ

(ಚಿತ್ರ ಸೆಲೆ: byrslf.co)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications