ಚುರುಮುರಿ ಉಂಡೆ

– ಸವಿತಾ.ಪುರಿ ಉಂಡೆ, ಚುರುಮುರಿ, churumuri, puri, unde, sweet

ಬೇಕಾಗುವ ಸಾಮಾನುಗಳು

  • ಚುರುಮುರಿ – 2 ಲೀಟರ್
  • ಬೆಲ್ಲ – 1/4 ಕಿಲೋ
  • ಒಣ ಕೊಬ್ಬರಿ ತುರಿ – 3 ಚಮಚ
  • ಹುರಿಗಡಲೆ ಹಿಟ್ಟು – 3 ಚಮಚ
  • ಗಸಗಸೆ – 1 ಚಮಚ
  • ಏಲಕ್ಕಿ – 2
  • ಲವಂಗ – 2

ಮಾಡುವ ಬಗೆ

ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರು ಹಾಕಿ ಒಲೆಯ ಮೇಲಿಟ್ಟುಕೊಳ್ಳಿ. ಎಳೆ ಬರುವಂತೆ ಪಾಕ ಮಾಡಿ ಒಲೆಯಿಂದ ಇಳಿಸಿ ಆರಲು ಬಿಡಿ. ಪಾಕಕ್ಕೆ ಒಣ ಕೊಬ್ಬರಿ ತುರಿ, ಹುರಿಗಡಲೆ ಹಿಟ್ಟು, ಗಸಗಸೆ ಮತ್ತು ಏಲಕ್ಕಿ-ಲವಂಗ ಪುಡಿ ಮಾಡಿ ಸೇರಿಸಿ. ಚುರುಮುರಿ ಹಾಕಿ ಚೆನ್ನಾಗಿ ಕಲಸಿ, ಉಂಡೆ ಕಟ್ಟಿಕೊಳ್ಳಿ. ರುಚಿಯಾದ ಪುರಿ ಅತವಾ ಚುರುಮುರಿ ಉಂಡೆ ಸವಿಯಿರಿ.

(ಚಿತ್ರ ಸೆಲೆ: ಸವಿತಾ)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.