ನೀನಿರೆ ಜೊತೆಯಲಿ ಕಾಲವೇ ನಿಲ್ಲದು

– ವೆಂಕಟೇಶ ಚಾಗಿ.love, flower, poem, ಒಲವು, ಹೂವು, ಕವಿತೆ

ಹೂಗಳ ಆ ಮಾತಲಿ
ನಿನ್ನದೇ ದನಿ ಕೇಳಿದೆ
ದುಂಬಿಯ ಆ ಸ್ವರದಲಿ
ನಿನ್ನದೇ ನಗು ಕೇಳಿದೆ

ಮನಸಿನಾ ಪುಟಗಳು
ನಿನ್ನನೇ ಬಯಸಿವೆ
ನಿನ್ನ ರೂಪಕೆ ಮನವು ಸೋತು
ಕವನವಾ ಹಾಡಿದೆ

ಬಾಳಿನಾ ಪಯಣದಿ
ನೀನಿರೆ ಸ್ವರ‍್ಗವೇ
ಕಾಣುವಾ ಈ ದರೆ
ಸುಂದರ ಸ್ರುಶ್ಟಿಯೇ
ಈ ಮನವಿಯ ಮನ್ನಿಸೇ
ಕಂಗಳು ಕೋರಿವೆ

ನೂತನ ಬಾಳಲಿ
ನಮ್ಮದೇ ಚಿಲಿಪಲಿ
ಬದುಕಿನ ಪಯಣದಿ
ನೀನಿರೆ ಕುಶಲವು
ಹೊಸ ನೋವು ನಿನ್ನ ನೆನಪು
ಕುಶಿಯನು ನೀಡಿವೆ

ಕಾಣದ ಆ ಕಲ್ಪನೆ
ಇಂದಿಗೆ ಕೊನೆಯಾಗಲಿ
ನೀನಿರೆ ಜೊತೆಯಲಿ
ಕಾಲವೇ ನಿಲ್ಲದು
ಗೆಲುವಿನಾ ಕುಶಿಯಲಿ
ನಿನ್ನದೇ ಬಹುಪಾಲಿದೆ
ನೀನೆ ಜೀವಾ ನೀನೆ ರಾಗ
ನನ್ನಯ ಬದುಕಿಗೆ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ರವಿಚಂದ್ರ ಹರ್ತಿಕೋಟೆ says:

    ಪ್ರೇಮ ಕವನ ತುಂಬಾ ಚೆನಾಗಿದೆ

ಅನಿಸಿಕೆ ಬರೆಯಿರಿ: