ಒಂದೇ ಒಂದು ಸಾರಿ ಮತ್ತೆ ಕಣ್ಮುಂದೆ ಬಾರೆ
– ಈಶ್ವರ ಹಡಪದ.
ನಿದಿರೆಯ ಪರದೆಯ ಮೇಲೆ
ಬರಿ ನಿನ್ನದೇ ನಗುಮೊಗವು
ಬದುಕಿನಲ್ಲಿ ಒಂಟಿಯಾದರು
ಜಂಟಿಯಾಗುವೆ ಕನಸಿನಲ್ಲಿ
ಕಳೆದು ಹೋದ ಬಾವನೆಗಳು ಜನಿಸಿವೆ
ಮತ್ತೆ ಬಾವಲೋಕದಲ್ಲಿ ನಿನಗಾಗಿ
ಒಂದೇ ಒಂದು ಸಾರಿ ಮತ್ತೆ ಕಣ್ಮುಂದೆ ಬಾರೆ
ಸಂತೆಯ ಕೊನೆಯ ಸಣ್ಣ ಹೂವಿನಂಗಡಿಯಲ್ಲಿ
ಕರೀದಿಸಬೇಕು ಕನಕಾಂಬರವನ್ನು
ಜ್ನಾಪಿಸೆಂದು ನೀ ಹೇಳಿದ್ದರೂ
ಗ್ನಾಪಿಸದೆ ಇದದ್ದು ಗ್ನಾಪಕವಾಗಿದೆ
ನಿನ್ನ ಗ್ನಾಪಕಶಕ್ತಿಯಿಂದಾನೆ ನನ್ನ
ದೂರವಾಗಿಸಿರುವಾಗ ಆದರೂ ಗ್ನಾಪಿಸುವೆ ಒಮ್ಮೆ
ಒಂದೇ ಒಂದು ಸಾರಿ ಮತ್ತೆ ಕಣ್ಮುಂದೆ ಬಾರೆ
ನವಿಲು ಗರಿಯ ಅಂದವು
ನಿನ್ನ ಅಂದದ ಮುಂದೆ ಅಲ್ಪವಲ್ಲವೇ
ಸಪ್ತಸಾಗರದ ಶಾಂತತೆಯೆಲ್ಲವೂ
ನಿನ್ನ ಶಾಂತತೆಗೆ ಸಾಟಿಯಿಲ್ಲವೇ
ನಿನ್ನ ಹೊಳಪನ್ನು ನೋಡಲಾಗದೆ
ಸೂರ‍್ಯನೇ ಕೂಲಿಂಗ್ ಗ್ಲಾಸ್ ಬೇಡುತಿಹನು
ಹೀಗೆಲ್ಲಾ ಹೊಗಳುವ ಆಸೆ ನಿನ್ನ
ಒಂದೇ ಒಂದು ಸಾರಿ ಮತ್ತೆ ಕಣ್ಮುಂದೆ ಬಾರೆ
(ಚಿತ್ರ ಸೆಲೆ: pixabay.com)
ಗ್ನಾಪಕದ ಸಾಲು ಮತ್ತು ಹೀಗೆಲ್ಲಾ ಹೊಗಳಲು ನೀ ಕಣ್ಮುಂದೆ ಬಾರೆ ಸಾಲುಗಳು ಬಹಳ ಇಷ್ಟವಾದವು :):)