ಮೊಹರಂ ಹಬ್ಬದ ಸಿಹಿತಿನಿಸು – ಚೊಂಗೆ
– ಸವಿತಾ.
ಉತ್ತರ ಕರ‍್ನಾಟಕದ ಬಾಗದಲ್ಲಿ ಮೊಹರಂ ಹಬ್ಬದಂದು ಮಾಡುವ ವಿಶೇಶ ಸಿಹಿ ತಿನಿಸು ಇದು.
ಬೇಕಾಗುವ ಸಾಮಾನುಗಳು
- ಗೋದಿ ಹಿಟ್ಟು – 1 ಬಟ್ಟಲು
- ಒಣ ಕೊಬ್ಬರಿ ತುರಿ – 1 ಬಟ್ಟಲು
- ಹುರಿಗಡಲೆ ಪುಡಿ – 1/2 ಬಟ್ಟಲು
- ಬೆಲ್ಲದ ಪುಡಿ – 1/4 ಬಟ್ಟಲು
- ಏಲಕ್ಕಿ – 2
- ಲವಂಗ – 2
- ಗೋಡಂಬಿ – 10
- ಬಾದಾಮಿ – 10
- ಒಣ ದ್ರಾಕ್ಶಿ – 10
ಮಾಡುವ ಬಗೆ
ಗೋದಿ ಹಿಟ್ಟಿಗೆ ನೀರು, ಸ್ವಲ್ಪ ಉಪ್ಪು ಹಾಕಿ ಚಪಾತಿ ಹಿಟ್ಟು ಕಲಸಿ ಇಟ್ಟುಕೊಳ್ಳಿ. ಚೊಂಗೆ ಮಾಡಲೆಂದೇ ಒಂದು ಮಣೆಯು ಸಿಗುವುದು. ಚಿತ್ತಾರವಿರುವ ಕಲ್ಲಿನ ಮಣೆಯದು. ಕೆತ್ತನೆ ಚಿತ್ತಾರ ಇರುವ ಚೊಂಗೆ ಮಣಿ ಬಳಸಿದರೆ ಚೊಂಗೆ ಚೆನ್ನಾಗಿ ಬರುತ್ತವೆ. ಚೊಂಗೆ ಮಣಿಗೆ ಸ್ವಲ್ಪ ತುಪ್ಪ ಸವರಿ, ಅದರ ಮೇಲೆ ಒಂದಿಶ್ಟು ಹಿಟ್ಟು ಹಿಡಿದು ದುಂಡಗೆ ಮಾಡಿ ಲಟ್ಟಿಸಿದರೆ, ಚಪಾತಿ ಮೇಲೆ ಚಿತ್ತಾರ ಮೂಡಿರುತ್ತದೆ. ಅದನ್ನು ಬಿಸಿ ತವೆಯ ಮೇಲೆ ಸ್ವಲ್ಪ ತುಪ್ಪ ಹಾಕಿ ಎರಡೂ ಕಡೆ ಬೇಯಿಸಿ ತೆಗೆಯಿರಿ.
ಏಲಕ್ಕಿ ಮತ್ತು ಲವಂಗ ಪುಡಿ ಮಾಡಿಕೊಳ್ಳಿ. ಇದಕ್ಕೆ ಒಣ ಕೊಬ್ಬರಿ ತುರಿ, ಹುರಿಗಡಲೆ ಪುಡಿ, ಬೆಲ್ಲದ ಪುಡಿ, ಒಣ ದ್ರಾಕ್ಶಿ ಮತ್ತು ಬಾದಾಮಿ ಸೇರಿಸಿ ಮಿಶ್ರಣ ಮಾಟಿಟ್ಟುಕೊಳ್ಳಿ. ಬೇಯಿಸಿದ ಚಪಾತಿಯ ಚಿತ್ತಾರ ಮೂಡಿದ ಒಂದು ಬದಿಗೆ ಮಾತ್ರ ಈ ಮಿಶ್ರಣ ಹಾಕಿ, ಒಂದರ ಮೇಲೆ ಒಂದು ಬೇಯಿಸಿಟ್ಟ ಚಪಾತಿ ಜೋಡಿಸಿ ಇಟ್ಟುಕೊಳ್ಳಿ. ಬೆಲ್ಲ ಪುಡಿ ಕರಗಿ ಚಪಾತಿಗೆ ಅಂಟಿಕೊಳ್ಳಲು ಸ್ವಲ್ಪ ಹೊತ್ತು ಬಿಡಬೇಕು. ಒಂದೊಂದೇ ಚೊಂಗೆ ತೆಗೆದು ಸವಿಯಲು ಕೊಡಿ.
(ಚಿತ್ರ ಸೆಲೆ: ಸವಿತಾ)
ಇತ್ತೀಚಿನ ಅನಿಸಿಕೆಗಳು