ಸಿಹಿ ಪ್ರಿಯರಿಗೆ ಸಜ್ಜಕ

– ಸವಿತಾ.

ಸಜ್ಜಕ, Sajjaka

ಏನೇನು ಬೇಕು?
 • ಮುಕ್ಕಾಲು ಲೋಟ ಬೆಲ್ಲ
 • 1 ಲೋಟ ಗೋದಿ ರವೆ ಅತವಾ ಉಪ್ಪಿಟ್ಟು ರವೆ
 • 3 ಲೋಟ ನೀರು
 • 3-4 ಚಮಚ ತುಪ್ಪ
 • 2 ಗೋಡಂಬಿ
 • 2 ಬಾದಾಮಿ
 • 4-5 ಒಣ ದ್ರಾಕ್ಶಿ
 • 1 ಚಮಚ ಗಸಗಸೆ
 • 3-4 ಚಮಚ ಒಣ ಕೊಬ್ಬರಿ ತುರಿ
 • 1 ಏಲಕ್ಕಿ
 • 2 ಲವಂಗ
ಮಾಡುವ ಬಗೆ

ಒಂದು ಚಮಚ ತುಪ್ಪ ಹಾಕಿ ರವೆಯನ್ನು ಸ್ವಲ್ಪ ಹುರಿದು ತೆಗೆದಿಡಿ. ಗೋಡಂಬಿ, ಬಾದಾಮಿಯನ್ನು ಕತ್ತರಿಸಿ ಅತವಾ ಸ್ವಲ್ಪ ಕುಟ್ಟಿ ಒಂದು ಚಮಚ ತುಪ್ಪದಲ್ಲಿ ಹಾಕಿ ಹುರಿದು ತೆಗೆದಿಡಿ. ಒಣ ದ್ರಾಕ್ಶಿಯನ್ನು ಕೂಡ ತುಪ್ಪದಲ್ಲಿ ಹುರಿದು ತೆಗೆದಿಡಿ.

ಅದೇ ಪಾತ್ರೆಯಲ್ಲಿ ಒಂದು ಚಮಚ ತುಪ್ಪ ಮತ್ತು 3 ಲೋಟ ನೀರು ಹಾಕಿ ಒಂದು ಕುದಿ ಕುದಿಸಿ ನಂತರ ರವೆ ಮತ್ತು ಬೆಲ್ಲ ಸೇರಿಸಿ ಕೈಯಾಡಿಸಿ. ಬಳಿಕ ಒಂದು ಕುದಿ ಕುದಿಸಿ ಇಳಿಸಿ.

ಏಲಕ್ಕಿ, ಲವಂಗ ಪುಡಿ ಮಾಡಿ ಸೇರಿಸಿ. ಒಣ ಕೊಬ್ಬರಿ ತುರಿ ಸೇರಿಸಿ. ಗಸಗಸೆ ಮೇಲೆ ಹಾಕಿ. ತುಪ್ಪದಲ್ಲಿ ಹುರಿದು ತೆಗಿದಿಟ್ಟಿದ್ದ ಗೋಡಂಬಿ, ಬಾದಾಮಿ, ಒಣ ದ್ರಾಕ್ಶಿ ಮೇಲೆ ಹಾಕಿದರೆ ಬಿಸಿ ಬಿಸಿ ಸಜ್ಜಕ  ಸವಿಯಲು ಸಿದ್ದ .

ಇದಕ್ಕೆ ತುಪ್ಪ ಮತ್ತು ಹಾಲು ಹಾಕಿಕೊಂಡು ತಿಂದರೆ ಇನ್ನೂ ರುಚಿ 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: