ಕವಿತೆ: ಹಸಿವು

– ಅಶೋಕ ಪ. ಹೊನಕೇರಿ.

cooking, burnt, vessel

ಉರಿವ ಒಲೆಯು
ಉರಿದುರಿದು ತಣ್ಣಗಾಗಲು
ಬೇಯಲಿಲ್ಲ, ಬರಿದಾದ ಪಾತ್ರೆ
ಕಾಲಿ ಹೊಟ್ಟೆಯ ಉರಿ
ತಣ್ಣಗಾಗಿಸಲು ಕಾದು
ಕಾದು ಕಪ್ಪಿಟ್ಟಿತೇ?

ನೋವಿನಿಂದ ಹೇಳಿತೆ
ನಿನ್ನ ಹಸಿವ ತಣಿಸಲು
ನನ್ನೊಡಲು ಬರಿದೆ
ಕಾಲಿ ಕಾಲಿ

ಕ್ಶಮಿಸಿ ಬಿಡು ನನ್ನೊಡೆಯ
ನನ್ನೊಡಲ ಉರಿಯಲಿ
ಏನಾದರೂ ಬೆಂದು
ನಿನ್ನೊಡಲ ಉರಿಯನು ತಣಿಸಲು

ನಾಳೆಯವರೆಗೂ
ಕಾಯೋಣ ಇಂದು ಬರಿ
ತಣ್ಣೀರ ಕುಡಿದು

ಒಡಲುರಿಯ ತಣಿಸಿಕೊಂಡು
ಮತ್ತು ನೆನೆ ನೆನೆದು ಮಲಗೋಣ
ಹುಟ್ಸಿದ್ ಸಿವ ಹುಲ್ ಮೇಯ್ಸಾಕಿಲ್ವ
ಎಂದು

( ಚಿತ್ರ ಸೆಲೆ : needpix.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಚೆನ್ನಾಗಿದೆ

Raghuramu N.V. ಗೆ ಅನಿಸಿಕೆ ನೀಡಿ Cancel reply

Enable Notifications OK No thanks