ಕವಿತೆ: ನನ್ನೊಲವೆ

– ಅಮರೇಶ ಎಂ ಕಂಬಳಿಹಾಳ.

ಬೀತಿ ಇಲ್ಲದ ಪ್ರೀತಿಯಲ್ಲಿ
ಚೆಲುವೆ ನೀ ಸುಂದರ
ನನ್ನೊಲವಿನ ಬನದಲ್ಲಿ
ಅರಳಿದ ಮಂದಾರ

ಎದೆಗೂಡಿಗೆ ದನಿಯಾಗಿ
ಸಂಗೀತದ ಜೇಂಕಾರ
ತಾರೆಗಳ ಜೊತೆಯಾಗಿ
ಮಿನುಗಲು ಮೊಗ ಚಂದಿರ

ಮ್ರುದು ಮಾತಿನ ಮೌನಕೆ
ಎಲ್ಲಿಲ್ಲದ ಮಮಕಾರ
ನಗುಮೊಗದ ಅದರಕೆ
ಮುತ್ತಿನ ಮಳೆ ಸಹಕಾರ

ಮುಂಗುರುಳು ತೂಗುಯ್ಯಾಲೆ
ತಲೆ ಮುಂದೆ ತಕದಿಮಿತ
ಮರಳಿ ಕೈಬೆರಳು ಕರೆವ
ಬಾವ ಬಂದ ಅನಂತ

ಜೊತೆಗಿರಲು ಜೀವನವು
ನೆಮ್ಮದಿಯ ಹಚ್ಚ ಹಸಿರು
ಒಡಗೂಡಿ ನಡೆದಾಡಲು
ಬಾಳಿಗದು ಸ್ವಚ್ಚ ಉಸಿರು

(ಚಿತ್ರಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: