ಕವಿತೆ : ಒಲವಿನ ಸಾಲ

– ಅಮರೇಶ ಎಂ ಕಂಬಳಿಹಾಳ.

ಒಲವು, love

ಬಡತನದ ಬೇಗೆಯಲ್ಲಿ
ಬಾಡುತಿರುವೆ ಓ ಚಲುವೆ
ಪ್ರೀತಿಯ ಸಾಲ ನೀಡಿ
ಸಹಕರಿಸು ಓ ಒಲವೆ

ಎದೆಗೂಡು ಎಡೆಬಿಡದೆ
ಏರುಪೇರಾಗುತಿದೆ
ಜೋರು ಬಡಿತದಿ
ಕತೆ ಮುಗಿಯುವಂತಿದೆ

ವಕ್ರದ್ರುಶ್ಟಿಯ ತೋರದಿರು
ಚಕ್ರಬಡ್ಡಿ ಕಟ್ಟಲೂ ಸಿದ್ದ
ಕೈ ಬಿಡದೆ ಕಾಪಾಡುವೆ
ಕೊನೆವರೆಗೆ ನಂಬಿಕೆಗೆ ಬದ್ದ

ಕಣ್ಣೀರು ಮನದ ತಣ್ಣೀರು
ಸಾಗರವಾಗಿ ಹರಿಯುತಿದೆ
ಒಲವಿನ ಸಾಲ ಬಯಸಿ
ಅನುಕ್ಶಣ ಕಾದು ಕುಳಿತಿದೆ

ಸಂದೇಹ ಬಿಟ್ಟು ಒಂದಾಗು
ಮುಂದೇನೇ ಬರಲಿ ನಾನಿರುವೆ
ಚೆಂದಾಗಿ ಗೂಡು ಕಟ್ಟುವೆ
ಸ್ವರ‍್ಗವ ದರೆಗಿಳಿಸುವೆ

( ಚಿತ್ರಸೆಲೆ: pexels.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications