ಕವಿತೆ : ನೆನೆಯುತ್ತಲೇ ನೆನೆಯುತ್ತಲೇ..

.

ಬರವಸೆ, hope

ಹಾಡುತ್ತಲೇ ಇತ್ತು ಹಾಡುತ್ತಲೇ ಇತ್ತು ಕೋಗಿಲೆ
ಸುತ್ತಿರುವವರು ತನ್ನ ಗಮನಿಸದೆ ಇದ್ದುದ್ದ ಗಮನಿಸಿ
ಹಾಡುತ್ತಲೇ ಇತ್ತು ಹಾಡುತ್ತಲೇ ಇತ್ತು ಕೋಗಿಲೆ
ತನ್ನಿರುವಿಕೆಯ ನೆಲಕೆ ಸಾರುತ್ತಲೇ ಸಾರುತ್ತಲೇ

ಸಾಗುತ್ತಲೇ ಇತ್ತು ಸಾಗುತ್ತಲೇ ಇತ್ತು ಮೋಡ
ಇಲ್ಲೀ ಎಡೆಯಲಿ ಮಳೆಯಿಸಲು ಒಲ್ಲೆನಿಸಿ
ಸಾಗುತ್ತಲೇ ಇತ್ತು ಸಾಗುತ್ತಲೇ ಇತ್ತು ಮೋಡ
ಮುಂದಾವುದೋ ಕಡಲು ಕರೆಯುತ್ತಲೇ ಕರೆಯುತ್ತಲೇ

ಬೀಸುತ್ತಲೇ ಇತ್ತು, ಬೀಸುತ್ತಲೇ ಇತ್ತು ಗಾಳಿ
ಮುನಿದಾಗ ಬಿರುಸಾಗಿ; ಹಿಗ್ಗಿನಲಿ ತಂಪಾಗಿ
ಬೀಸುತ್ತಲೇ ಇತ್ತು ಬೀಸುತ್ತಲೇ ಇತ್ತು ಗಾಳಿ
ಜಗದ ಜಡತನವ ಮೆಟ್ಟುತ್ತಲೇ ಮೆಟ್ಟುತ್ತಲೇ

ಇತ್ತ ನಾನು;
ಊರುತ್ತಲೇ ಇದ್ದೆ, ನೆಲೆಯೂರುತ್ತಲೇ ಇದ್ದೆ
‘ನಾವಾ’ಗುವ ಎಲ್ಲ ಮೊಗಸು ಸೋಲೆಂದೆನಿಸಿ
ಊರುತ್ತಲೇ ಇದ್ದೆ, ನೆಲೆಯೂರುತ್ತಲೇ ಇದ್ದೆ
ಮುಂಬೊತ್ತಿನ ಬದುಕ ನೆನೆಯುತ್ತಲೇ ನೆನೆಯುತ್ತಲೇ

( ಚಿತ್ರ ಸೆಲೆ : hopegrows.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications