ಕವಿತೆ : ನೆನಪಿನ ಅಲೆ

ಶಶಾಂಕ್.ಹೆಚ್.ಎಸ್.

ನೆನಪು, Memories

ಮನದ ಜೋಳಿಗೆಯಲ್ಲೊಂದು ಪುಟ್ಟ ನೋವು
ಯಾರಿಗೂ ಕೇಳಿಸದು, ಕೇಳಿಸಿದರು ಅರ‍್ತವಾಗದು
ಪುಟ್ಟ ಪುಟ್ಟ ನೆನಪುಗಳ ಜೋಪಡಿಯದು
ತತ್ತರಿಸಿ ಕತ್ತರಿಸಿ ಹರಿದಿರುವುದು
ಆ ಜೋಪಡಿಯ ಮಾಳಿಗೆಯು
ನೋವಿನ ಬಿರುಗಾಳಿಯ ಹೊಡೆತದಲಿ

ಬದುಕೆಂಬ ನೌಕೆಯು ಮುಳುಗಿಹುದು
ಪ್ರೀತಿಯ ದುಗುಡದ ನದಿಯಲಿ
ದುಕ್ಕದ ಕಡಲ ಕಟ್ಟೆ ಒಡೆದು
ಚಿದ್ರ ಚಿದ್ರವಾಗಿಹುದು ಕನಸಿನ ಅರಮನೆಯು

ಪ್ರೀತಿಯೆಂಬ ಸಂಜೀವಿನಿಯು ದೂರವಾಗಿಹಲು
ಸತ್ತ ಶವವಾಗಿವುದು ಜೀವವು
ಅವಳು ಬರುವ ಹಾದಿಯ
ಕಾದು ಕಾದು ಪರಿತಪಿಸುತಿಹುದು ಮನವು

ಬಿಕ್ಕಳಿಸಿ ಬಿಕ್ಕಳಿಸಿ ಅಳುತಿಹುದು ಕಂಗಳು
ಅವಳೆಂಬ ನೆನಪ ನೆನದು
ಈ ನೆನಪೆಂಬ ಅಲೆಯಲ್ಲಿ ಬದುಕಿನ ಯಾನವು
ಸೇರಲಾಗದ ಗಮ್ಯಸ್ತಾನದೆಡೆಗೆ
ನೆನಪೆಂಬ ಅಲೆಯು ಅಪ್ಪಳಿಸುತ್ತಿರಲು
ಮನಸೆಂಬ ಕಡಲ ತೀರವಾಗಿಹುದು
ರಾಶಿ ರಾಶಿ ಕನಸುಗಳ ಸ್ಮಶಾನದಂತೆ

( ಚಿತ್ರಸೆಲೆ : cainellsworth.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: