ಪ್ರೀತಿಯ ಪ್ರತಿಬಿಂಬವೇ ತಂದೆ…

ಶ್ಯಾಮಲಶ್ರೀ.ಕೆ.ಎಸ್.

ತಂದೆ, father

ಪ್ರೀತಿಯ ಪ್ರತಿಬಿಂಬವೇ
ತಂದೆ
ಬೆಂಗಾವಲಾಗಿಹನು ತನ್ನ
ಮಕ್ಕಳ ಹಿಂದೆ

ಅಪ್ಪನೆಂಬ ನಾಯಕನಿರಲು
ಇಲ್ಲ ಕುಂದು-ಕೊರತೆ
ಕಶ್ಟಗಳ ಮರೆಮಾಚಿಹ
ಕಣ್ಣಿಗೆ ಕಾಣದಂತೆ

ತೋರುವನು ಜೀವನಕ್ಕೆ
ಮಾರ‍್ಗದರ‍್ಶನ
ಆದರ‍್ಶ, ಸ್ವಾಬಿಮಾನಕ್ಕೆ
ಆತನೇ ನಿದರ‍್ಶನ

ಅಪ್ಪನ ಅಕ್ಕರೆಯೇ
ಬಾಳಿಗೆ ಸ್ಪೂರ‍್ತಿ
ಅಗೋಚರ ಶಕ್ತಿಯಾಗಿಹನು
ಈ ದೈವಿಕ ಮೂರ‍್ತಿ

( ಚಿತ್ರ ಸೆಲೆ: pixabay )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: