ಕವಿತೆ : ಇಚ್ಚಾ ಮರಣಿ
– ವಿನು ರವಿ.
ಕಣ್ಣಿಗೆ ಬೀಳುವ ಸುಂದರ
ಕುವರಿಯರ ಅಂತಹಪುರದಲಿ
ತಂದಿರಿಸಿ ಮೀಸೆ ತಿರುವುತ
ಬೋಗದಲಿ ಮೈಮರೆತು ಮೆರೆವ
ರಾಜರ ನಡುವೆ ಇವನು
ಆಜನ್ಮ ಬ್ರಹ್ಮಚಾರಿ
ಕುಲದ ಪ್ರತಿಶ್ಟೆ ಬೆಳೆಸಲು
ಪರಾಕ್ರಮದಿ ಜಯಿಸಿ
ತಂದ ಅಬಲೆಯರ
ಮನಸಿನಾಳವ ಅರಿಯದೆ
ಕೋಪಾಗ್ನಿಗೆ ಗುರಿಯಾದ ಇವನು
ಶಾಪಗ್ರಸ್ತ
ಕಣ್ಮುಂದೆಯೇ ಕುಲನಾರಿಯ
ದುರುಳರು ಅಪಮಾನಿಸಿ
ಅಟ್ಟಹಾಸವು ಕೇಕೆ ಹಾಕಿ
ನಗುವಾಗ ಇವನು
ಸ್ತಿತಪ್ರಜ್ನ
ಕಾಲ ಎಸೆದಾ ದಾಳಗಳ
ದಾಳಿಗೆ ಸಿಲುಕಿ ಅಹಂಕಾರವು
ಬಳಲುವಾಗ ಮಹಾಸಂಗ್ರಾಮದಲಿ
ರಕ್ತದ ಕಲೆಗಳು ಮೆತ್ತಿದ
ಶರಶಯ್ಯೆಯಲಿ ವಿರಮಿಸಿದ ಇವನು
ಇಚ್ಚಾ ಮರಣಿ
( ಚಿತ್ರಸೆಲೆ : wikipedia )
ಇತ್ತೀಚಿನ ಅನಿಸಿಕೆಗಳು