ಕವಿತೆ : ಎದುರಿಗೆ ಬಾರದ ಗೆಳತಿ

ಸ್ಪೂರ‍್ತಿ. ಎಂ.

ನೆನಪು, Memories

ಎದುರಿಗೆ ಬರದಿದ್ದರೆ ಅಡ್ಡಿಯಿಲ್ಲ
ಅಂತರಂಗದಲ್ಲಿ ಸದಾ ಇರುವೆಯಲ್ಲ

ಎಗ್ಗಿಲ್ಲದೆ ಸುರಿಸಿದೆ ಕಣ್ಣೀರನೆಲ್ಲ
ಆದರೂ ವಿದಿ ಮುಂದೆ ನಡೆಯಲಿಲ್ಲ

ನಿನ್ನ ಮುಕ ನೋಡಬೇಕೆನಿಸಿದಾಗೆಲ್ಲ
ನಿನ್ನ ಬಾವಚಿತ್ರ ನನ್ನ ಬಳಿ ಇದೆಯಲ್ಲ

ನಿನ್ನ ಸವಿನುಡಿ ಕೇಳಬೇಕೆನಿಸಿದಾಗೆಲ್ಲ
ಅಂತರಂಗದಿ ನೀನು ಮಾತನಾಡುವೆಯಲ್ಲ

ಮನಸಿನಿಂದ ನಾವಿಬ್ಬರು ಬೆರೆತೆವಲ್ಲ
ನಮ್ಮನ್ನು ಬೇರ‍್ಪಡಿಸಲು ಸಾದ್ಯವೇ ಇಲ್ಲ

ಬೆಟ್ಟದಶ್ಟು ಪ್ರೀತಿ ನಮ್ಮಿಬ್ಬರಲ್ಲಿದೆಯಲ್ಲ
ಸನಿಹವಾಗಿರಲು ನೆನಪುಗಳೇ ಸಾಕಲ್ಲ

ನಮಗೆ ಇದಕ್ಕಿಂತ ಹೆಚ್ಚೇನು ಬೇಕಿಲ್ಲ
ಚಿಂತಿಸದಿರು ಗೆಳತಿ, ನಾನಿರುವೆನಲ್ಲ

( ಚಿತ್ರಸೆಲೆ : cainellsworth.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: