ಮಾಡಿ ನೋಡಿ ಕೋಡುಬಳೆ
– ಸವಿತಾ.
ಬೇಕಾಗುವ ಸಾಮಾನುಗಳು
- ಅಕ್ಕಿ ಹಿಟ್ಟು – 1 ಲೋಟ
- ಮೈದಾ ಹಿಟ್ಟು – 1/4 ಲೋಟ
- ಚಿರೋಟಿ ರವೆ – 1/4 ಲೋಟ
- ಹಸಿ ಕೊಬ್ಬರಿ ತುರಿ – 1/4 ಲೋಟ
- ಒಣ ಮೆಣಸಿನ ಕಾಯಿ – 4
- ಜೀರಿಗೆ – 1/2 ಚಮಚ
- ಓಂ ಕಾಳು (ಅಜವಾನ್) – 1/4 ಚಮಚ
- ಇಂಗು – 1/4 ಚಮಚ
- ಉಪ್ಪು – 1 ಚಮಚ
- ಕರಿಬೇವು – 5-6 ಎಲೆ
- ಎಳ್ಳು (ಕಪ್ಪು ಮತ್ತು ಬಿಳಿ) – 2 ಚಮಚ
- ಎಣ್ಣೆ – ಕರಿಯಲು
ಮಾಡುವ ಬಗೆ
ಅಕ್ಕಿ ಹಿಟ್ಟು, ರವೆ ಮತ್ತು ಮೈದಾ ಹಿಟ್ಟನ್ನು ಬೇರೆ ಬೇರಯಾಗಿ ಹುರಿದು ತೆಗೆದಿಡಿ. ಮೆಣಸಿನ ಕಾಯಿ ಹುರಿದು ನಂತರ ಹಸಿ ಕೊಬ್ಬರಿ ತುರಿ ಸೇರಿಸಿ. ಅದಕ್ಕೆ ಕರಿಬೇವು, ಜೀರಿಗೆ, ಓಂ ಕಾಳು, ಇಂಗು, ಉಪ್ಪು ಮತ್ತು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.
ಹುರಿದು ಇಟ್ಟುಕೊಂಡ ಎಲ್ಲ ಹಿಟ್ಟು ಸೇರಿಸಿ 2 ಚಮಚ ಕಾದ ಎಣ್ಣೆ, ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ನಾದಿಕೊಳ್ಳಿ. ರಿಂಗ್ ತರಹ ಕೋಡುಬಳೆ ಮಾಡಿ ಒಂದು ತಟ್ಟೆಯಲ್ಲಿ ಎಳ್ಳು ಸುರಿದು ಹೊರಳಾಡಿಸಿ ಇಟ್ಟುಕೊಳ್ಳಿ.
ಎಣ್ಣೆ ಬಿಸಿ ಮಾಡಿ, ಕರಿದು ತೆಗೆದರೆ ಗರಿ ಗರಿ ಕೋಡುಬಳೆ ಸವಿಯಲು ಸಿದ್ದ. ಸಂಜೆ ಚಹಾದೊಂದಿಗೆ ಕೋಡುಬಳೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು