ಕವಿತೆ: ಬಾಲ್ಯದ ನೆನಪು

– ಶ್ಯಾಮಲಶ್ರೀ.ಕೆ.ಎಸ್.

ಬಾಲ್ಯದ ನೆನಪದುವೇ
ಅಚ್ಚರಿಗಳ ಬುತ್ತಿ
ಮುಗ್ದ ಮನಸ್ಸಿನ
ಬಾವಗಳ ಗುತ್ತಿ

ಮತ್ತೆ ಮತ್ತೆ ಹಿಂತಿರುಗಿ
ನೋಡಬೇಕೆನ್ನುವುದು ಮನವು
ಅಡಿಗಡಿಗೂ ಅಡ್ಡಲಾಗಿ
ನಿಂತಿರುವುದೀ ಕಾಲವು

ಆಗು ಹೋಗುಗಳ ಅರಿವಿರದ
ಸುಂದರ ವಯೋಮಾನವದು
ಸ್ನೇಹಲೋಕದಲ್ಲಿ ಅರಳಿದ
ಸ್ನೇಹಿತರ ಸಮೂಹವದು

ಹರುಶದಿ ಹಿಗ್ಗಿದ ಕ್ಶಣಗಳು
ಎಣಿಸಲಾಗದ ಆಟಗಳ ಸಾಲು
ಮರಳಿಬಾರದೇ ಆ ದಿನಗಳು
ಬಾಲ್ಯದ ಸಿಹಿ ಸವಿಯಲು

(ಚಿತ್ರ ಸೆಲೆ: maxpixel.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: