ಕವಿತೆ: ಸಾರ‍್ತಕ ಬದುಕು

– ವೆಂಕಟೇಶ ಚಾಗಿ.

biography, ಆತ್ಮಚರಿತ್ರೆ, ಬರಹ, writing

ಕವನವ ಬರೆದೆನು ಕಲ್ಪನೆಯಿಂದಲೇ
ಕನಸನು ಕಟ್ಟುವ ಪರಿಯಲ್ಲಿ
ಅನುಬವದಿಂದಲೇ ಪಡೆದುದನೆಲ್ಲವ
ಕವನದಿ ಬರೆದೆನು ಚಂದದಲಿ

ಸುಕ-ದುಕ್ಕಗಳು ಬದುಕಿನ ದರ‍್ಪಣ
ಕಾಲದ ಮಹಿಮೆಯ ಮಾಯೆಗಳು
ಬದುಕಿನ ಸುಂದರ ಗಳಿಗೆಯ ಚಂದಿರ
ತರುವನು ಶಾಂತಿಯ ಕ್ಶಣಗಳನು

ಹಿರಿಯರು ತೋರಿದ ನ್ಯಾಯ ಮಾರ‍್ಗದಿ
ನಡೆದರೆ ಬದುಕದು ನಂದನವು
ವಿದವಿದ ಪಾತ್ರಗಳಾಟದ ನಾಟಕ
ನಗುತಲಿ ಇದ್ದರೆ ಸುಂದರವು

ಕಲ್ಪಿತ ಜೀವನಕೆ ಆಶಿಸದೆ
ಎಮ್ಮಯ ಕರ‍್ಮದ ಪಲವನು ಅನುಬವಿಸಿ
ಬಂದುದನೆಲ್ಲವ ಸ್ವಾಗತಿಸುತಲಿ
ಮುನ್ನಡೆದರೆ ನಮಗದೇ ವಾಸಿ

ಒಳ್ಳೆಯ ಮನದಲಿ ಒಳ್ಳೆಯ ಕಾರ‍್ಯವು
ಎಲ್ಲರ ಮನವನು ಗಳಿಸುವುದು
ಗೆಲ್ಲುತ ಗೆಲ್ಲುತ ಬದುಕೇ ಗೆದ್ದರೆ
ಜನ್ಮವೇ ಸಾರ‍್ತಕವಾಗುವುದು

(ಚಿತ್ರಸೆಲೆ:needpix)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications