ಕವಿತೆ: ಮೌನ ಪ್ರೇಮ

–  .

ಒಲವು, Love

ಮನದ ಮಾತಿಗೆ ಬಾವಗಳ ಸಂತೆಗೆ
ಮಿಡಿದ ಹ್ರುದಯಗಳು
ಮೌನದಿ ಪ್ರೇಮ ಚುಂಬಕವಾಗಿ

ಮನದಲಿ ಪ್ರೇಮ ಮುದ್ರೆಯೊತ್ತಿ
ಮದುರ ಕಾವ್ಯವ ಗೀಚಿ
ಮುನ್ನುಡಿಯ ಕನ್ನಡಿಯಾಗಿ

ಮನ ಬೆರೆತು ಪ್ರತಿಪಲನಗೊಂಡು
ಮೇರು ಪ್ರೇಮ ಪರ‍್ವಕೆ
ಮದರಂಗಿ ರಂಗು ಚೆಲ್ಲಿ

ಮಾರ‍್ದನಿಸಿದ ಪ್ರೇಮದ ಇನಿದನಿಗೆ
ಮುಂಗುರುಳು ಲಾಸ್ಯವಾಡಿ
ಮಲೆತು ಕೊರಳುಬ್ಬಿ

ಮೈಮರೆತ ಕ್ಶಣ ಮಾತ್ರಕೆ
ಮೈಮನ ಬಿಗಿದಪ್ಪಿ ಮೌನ ರಾಗವಾಡಲು
ಮಮತೆಯ ಮಾತೆಯಾಗುವ ಬಾಗ್ಯ
ಮೆತ್ತಗೆ ಕೊಟ್ಟನಲ್ಲ ನನ್ನ ನಲ್ಲ

( ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: