ಕವಿತೆ: ಕಾಯುತ್ತಿದೆ ನೋವು

– ವಿನು ರವಿ.

ಗೆಳತಿ, ಕನಸು, ಶಾಂತತೆ, love, dream

ಎದೆಯಾಳದಲ್ಲೊಂದು
ಹೇಳಲಾಗದ ನೋವು
ಬಾವನೆಗಳ ತೀರದ ಒಲವು

ಕಣ್ಣಂಚಿನ ಕೊನೆಯಲಿ
ಇಳಿದ ಕಂಬನಿ
ಗಂಟಲು ಹಿಡಿದ ನೋವಿನ ದನಿ

ಸಮಾದಾನ ಹೇಳಿ
ರಮಿಸುತ್ತಿದೆ ಮನಸು
ಹೇಳು ಯಾರಿಗಿಲ್ಲ ನೋವು

ಕೊಡಲೇನು ಪ್ರೀತಿ ಶಾಂತಿ
ಸಾಂತ್ವನದ ಕಾಣಿಕೆ
ಬಚ್ಚಿಡು ಸುಮ್ಮನೆ

ಎಶ್ಟು ಹೇಳಿದರೂ
ಎದೆಯೊಳಗೆ ಹುದುಗಿ
ಮರೆಯಾಗದೆ
ಮತ್ತೆ ಮತ್ತೆ ಬಾವನೆಗಳ
ಮುದುಡಿಸುತ್ತಿದೆ

ಕಾಣದೂರಿಗೊಂದು ಕಾಗದ ಹಾಕಿ
ಕರೆಗಾಗಿ ಕಾಯುತ್ತಿದೆ
ನೋವು ಕಾಯುತ್ತಿದೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ತುಂಬ ಚೆನ್ನಾಗಿದೆ

ಅನಿಸಿಕೆ ಬರೆಯಿರಿ: