ಕವಿತೆ : ಒಲವಿನ ಪಯಣ
ಒಲವೆಂಬ ಚುಂಬಕಕೆ
ಆಕರ‍್ಶಣೆಯುಂಟು
ಒಲವಿನ ನವಿರಾದ ತೀಡುವಿಕೆಗೆ
ಹಣ್ಣೆಲೆಯೂ ಚಿಗುರುವುದುಂಟು
ಕೊರಡು ಕೊನರುವುದುಂಟು
ಮೌನ ಮನದೊಳಗಿನ
ಬಚ್ಚಿಟ್ಟುಕೊಂಡ ಒಲವಿನ
ತೊಳಲಾಟದ ಪಯಣಕೆ
ಅಪಗಾತವೆ ಆಸರೆಯಾದಿತು
ಬದುಕು ಊನವಾದೀತು
ಒಲವಿನ ಲತೆ ಬಳುಕಿ
ಲಾಸ್ಯವಾಡಿ ಮನವ ಮೀಟಿರಲು
ಮೌನವೇತಕೆ ಮತ್ತೆ
ಇನಿಯಳ ಮುಂದೆ ಮನವ ಬಿಚ್ಚಿಟ್ಟು
ಒಲವಿನ ಸಂಗೀತದಾರೆ ಹರಿಸಿ ಬಿಡು
ಬರೆದ ಹ್ರುದಯ ಓದಲು ತೆರೆದು ಬಿಡು
ಬದುಕಿಗೇನು ಮುನ್ನೂರು
ವಸಂತಗಳೇ
ಕಿರಿದಾದ ಬದುಕಿನ ಹಾದಿಯಲಿ
ಅಡೆತಡೆಯಿಲ್ಲದೆ ಒಲವಿನ
ಪಯಣ ಬೆರೆತು ಸಾಗಬೇಕು
ಅರಿತು ಸ್ವರ‍್ಣಯುಗವಾಗಬೇಕು
ಕಿರಿದಾದ ಬದುಕ ಯಾತ್ರೆಯಲಿ
ಒಲವಿನ ಹಿರಿದಾದ ಪಯಣಕೆ
ಒಲವು ನಿತ್ಯ ಹಸಿರಾಗಲಿ
ಪ್ರಾಣದುಸಿರಾಗಿರಲಿ
ಪರಸ್ಪರ ಅರಿವು ಒಲವಿನ
ಪಯಣಕೆ ದಾರಿದೀಪವಾಗಲಿ
( ಚಿತ್ರ ಸೆಲೆ: pixabay.com )
ಚೆನ್ನಾಗಿದೆ