ಹನಿಗವನಗಳು

– .

ಅಂದು-ಇಂದು

ಅಂದು… ಕಂಗಳಲಿ ಕನಸು
ಕುಶಿಯಲಿ ಗರಿಗೆದರಿದ ಮನಸು
ಇಂದು… ನನಸಾಗದ ಕನಸು
ಮುದುಡಿದ ತಾವರೆಯಾದ ಮನಸು

***

ಕನಸು

ಕನಸಿನ ಸೊಗಸಿರುವುದೇ
ನನಸಾಗುವ ನಿರೀಕ್ಶೆಯಲಿ

***

ನೋವು-ನಲಿವು

ಇರುತ್ತವೆ ಜೊತೆಯಲ್ಲೇ
ಅಗಲದೆ ನೋವು ನಲಿವು
ಇದನರಿಯದಾದೆವು ನಾವು
ವಿಶ್ರಮಿಸಲು ನೋವು
ಎದ್ದೇಳುವುದು ನಲಿವು

***

ಚೂರಿ
ಚಿಮ್ಮಿಸಬಹುದು ರಸವನ್ನು
ಚಿಮ್ಮಿಸಬಹುದು ರಕುತವನ್ನೂ

***

ಪ್ರೀತಿ
ಉಕ್ಕಲು ಜೀವನವೇ ಒಯಾಸಿಸ್
ಬತ್ತಲು ಜೀವನವೇ ಮರುಬೂಮಿ

***

ಸ‌ಂಸಾರ
ಒಂದಾಗಿರಲು ಸ್ವರ‍್ಗದ ಅಚ್ಚು
ಬೇರೆಯಾಗಲು ನರಕದ ಕಿಚ್ಚು

***

ಬೋಗ
ಇತಿ ಮಿತಿಯಲ್ಲಿರೆ ಸುಕದ ನಗು
ಮಿತಿ ಮೀರಿದರೆ ವ್ಯಾದಿಯ ಕೊರಗು

***

ಹಂಬಲ
ಹಂಬಲಿಸುತ್ತೇವೆ ಕಾಣುವ ಸುಕಕ್ಕೆ
ಕಾಣದ ಹಿಂದಿರುವ ದುಕ್ಕಕ್ಕೂ!

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: