ಕವಿತೆ: ಮರಳಿ ಬಂತು ಯುಗಾದಿ

– ವೆಂಕಟೇಶ ಚಾಗಿ.

yugadi

ಯುಗದ ಆದಿ ಮರಳಿ ಬಂತು ಯುಗಾದಿ
ಹಳತು ಬೇರು ಹೊಸತು ಚಿಗುರ ಯುಗಾದಿ

ಮಾವು ಬೇವು ಹೂವು ಮುಡಿದು
ಚಿಗುರು ಕಾಯಿ ಮೂಡಿ ಬರಲು
ತಾಯಿ ಮಮತೆ ಸಡಗರ
ನಿಸರ‍್ಗ ಕುಶಿಯ ಆಗರ

ಬೇವು ಬೆಲ್ಲ ಸೇರಿ ಸವಿದು
ನೋವು ನಲಿವು ಎಲ್ಲ ಪಡೆದು
ಸಮರಸವಿದು ಜೀವನ
ಸಪ್ತಸ್ವರಗಳ ಗಾಯನ

ಹಳೆಯ ಬದುಕು ಬೇರಿನಂತೆ
ಹೊಸತು ಕನಸು ಚಿಗುರಿನಂತೆ
ಸ್ನೇಹ ಮದುರ ಬಂದನ
ಕುಶಿಯ ಕ್ಶಣವೂ ನೂತನ

ಹ್ರುದಯ ಹ್ರುದಯ ಬೆಸೆದು ನಗಲಿ
ನೂರು ಮುನಿಸು ಮರೆತು ಬಿಡಲಿ
ಬುವಿಯ ಕಳೆಯು ಬೆಳಗಲಿ
ಯುಗಾದಿ ದಿನವೂ ಮರಳಲಿ

ಮತ್ತೆ ಮತ್ತೆ ಮರಳಲಿ ಬೇವು-ಬೆಲ್ಲ ಯುಗಾದಿ
ನೋವನೆಲ್ಲ ಮರೆಸಲಿ ಸಡಗರದ ಯುಗಾದಿ

(ಚಿತ್ರ ಸೆಲೆ: mangalorean.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಚೆನ್ನಾಗಿದೆ ಸರ್

ಅನಿಸಿಕೆ ಬರೆಯಿರಿ: