ಹೊನಲುವಿಗೆ 8 ವರುಶ ತುಂಬಿದ ನಲಿವು

– ಹೊನಲು ತಂಡ.

ಪ್ರತಿದಿನ ಹೊಸ ಬರಹದೊಂದಿಗೆ ಓದುಗರಿಗೆ ಹೊಸ ವಿಶಯಗಳನ್ನು ತಲುಪಿಸುತ್ತಿರುವ ಹೊನಲುವಿಗೆ ಇಂದು ಹುಟ್ಟು ಹಬ್ಬದ ಸಡಗರ. ಹೊಸತನವನ್ನು ಹೊತ್ತು ತರುತ್ತಿರುವ ಹೊನಲು ಆನ್‌ಲೈನ್‌ ಮ್ಯಾಗಜೀನ್‌ ಇಂದು 8 ವರುಶಗಳನ್ನು ಮುಗಿಸಿ 9ನೆಯ ವರುಶಕ್ಕೆ ಕಾಲಿಡುತ್ತಿದೆ. ಇದಕ್ಕೆ ಕಾರಣರಾದ ಬರಹಗಾರರಿಗೂ, ಓದುಗರಿಗೂ ಮತ್ತು ಎಲ್ಲರಿಗೂ ಮನದಾಳದ ನನ್ನಿ.

ಕಳೆದ 8 ವರುಶಗಳಲ್ಲಿ ಹೊನಲಿನಲ್ಲಿ ಸುಮಾರು 3,400ಕ್ಕೂ ಹೆಚ್ಚು ಬರಹಗಳು ಮೂಡಿಬಂದಿವೆ. ಈ ಬರಹಗಳು ಜಗತ್ತಿನ ಮೂಲೆ ಮೂಲೆಯಲ್ಲಿರುವ ಕನ್ನಡಿಗರಿಗೆ ಪ್ರತಿದಿನವೂ ತಲುಪುತ್ತಿವೆ. ಹೊಸ ಹೊಸ ವಿಶಯಗಳಿಗೆ, ಹೊಸ ಬರಹಗಾರರಿಗೆ ವೇದಿಕೆಯಾಗಬೇಕು ಎಂಬ ಆಸೆ ಹೊಂದಿದ್ದ ಹೊನಲಿನಲ್ಲಿ ಇಲ್ಲಿಯವರೆಗೆ 320 ಕ್ಕಿಂತ ಹೆಚ್ಚು ಬರಹಗಾರರು ತಮ್ಮ ಬರಹಗಳನ್ನು ಮೂಡಿಸಿದ್ದಾರೆ. ಹೊಸ ಬರಹಗಾರರ ಮತ್ತು ನುರಿತ ಬರಹಗಾರರ ಬರವಣಿಗೆಗೆ ಹೊನಲು ವೇದಿಕೆಯಾಗಿರುವುದು ಹೆಮ್ಮೆಯ ವಿಶಯ. 35ಕ್ಕೂ ಹೆಚ್ಚು ಬರಹಗಾರರು 25ಕ್ಕೂ ಹೆಚ್ಚು ಬರಹಗಳನ್ನು ಹೊನಲಿನಲ್ಲಿ ಮೂಡಿಸಿದ್ದಾರೆ. ಪ್ರತೀ ವರುಶವೂ ಹೊಸ ಹೊಸ ಬರಹಗಾರರು ಹೊನಲು ಬರಹಗಾರರ ಸಮುದಾಯಕ್ಕೆ ಸೇರುತ್ತಾ ಹೊನಲಿನ ಬರಹಗಾರರ ಎಣಿಕೆ ಹೆಚ್ಚುತ್ತಿರುವುದು ನಲಿವಿನ ವಿಚಾರ

ಮಿಂದಾಣದಲ್ಲಿ ಮೂಡಿ ಬರುತ್ತಿರುವ ಕತೆ, ಕವಿತೆ, ಅಡುಗೆ, ಆಹಾರ ವಿಜ್ನಾನ, ಮಕ್ಕಳ ಬರಹಗಳು, ಸುತ್ತಾಟ, ಸೋಜಿಗದ ಸಂಗತಿ, ವಚನಗಳು, ರಣಜಿ ಕ್ರಿಕೆಟ್ ಕುರಿತ ಮಾಹಿತಿಪೂರ‍್ಣ ಬರಹಗಳು ಹೊನಲಿನ ಮೆರುಗನ್ನು ಹೆಚ್ಚಿಸಿವೆ. 

ಹೊನಲು ಪೇಸ್‌ಬುಕ್‌ ಪುಟವು ಸುಮಾರು 29,000 ಕ್ಕೂ ಮೆಚ್ಚುಗೆಗಳನ್ನು ಮತ್ತು ಹೊನಲು ಟ್ಟಟರ‍್‌ ಗೂಡು 6,600 ಕ್ಕೂ ಹೆಚ್ಚು ಮಂದಿ ಹಿಂಬಾಲಕರನ್ನು ಹೊಂದಿದೆ. ಸುಮಾರು 7,500 ಮೊಬೈಲ್ ಬಳಕೆದಾರರು ತಮ್ಮ ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಹೊನಲು ಬಳಕವನ್ನು (app) ಅಳವಡಿಸಿಕೊಂಡಿದ್ದಾರೆ.

ಬರಹಗಾರರ ಹುಮ್ಮಸ್ಸು, ಓದುಗರ ಹುರಿದುಂಬಿಕೆ ಹೊನಲಿನ ಬೆನ್ನೆಲುಬು. ಹೊನಲಿಗಾಗಿ ಹೊತ್ತು ಕೊಟ್ಟು ಬರಹ ಮಾಡುತ್ತಿರುವ ಎಲ್ಲ ಬರಹಗಾರರಿಗೂ, ಹೊನಲಿಗೆ, ಹೊನಲಿನ ಬರಹಗಾರರಿಗೆ ಮೆಚ್ಚುಗೆ ಮತ್ತು ಬೆಂಬಲ ನೀಡುತ್ತಿರುವ ಎಲ್ಲರಿಗೂ ಮನದಾಳದ ನನ್ನಿ. ನಮ್ಮೆಲ್ಲ ಬರಹಗಾರರಿಗೂ, ಓದುಗರಿಗೂ, ಹಿತೈಶಿಗಳಿಗೂ ಮತ್ತೊಮ್ಮೆ ವಂದಿಸುವೆವು. ಹೊನಲಿಗೆ ನಿಮ್ಮ ಬೆಂಬಲ ಹೀಗೆಯೇ ಮುಂದುವರೆಯುತ್ತಿರಲಿ 🙂

ಹೊನಲು ಪೇಸ್‌ಬುಕ್‌ ಪುಟ : https://www.facebook.com/honalu.mimbagilu
ಹೊನಲು ಟ್ವಿಟರ್ ಗೂಡು : https://twitter.com/honalunet
ಇನ್ಸ್ಟಾಗ್ರಾಂನಲ್ಲಿ ಹೊನಲು : https://www.instagram.com/honalunet/

8 ಅನಿಸಿಕೆಗಳು

  1. ಸೊಗಸಾಗಿ ಮೂಡಿ ಬರ್ತಾ ಇದೆ. ಇನ್ನೂ ಹೆಚ್ಚು ಮಂದಿಯನ್ನು ತಲುಪಲಿ ಎಂದು ಹಾರೈಕೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.