ಕವಿತೆ: ಮಿನುಗು ತಾರೆ ನೀನು

– ವಿನು ರವಿ.

ಒಲವು, ಪ್ರೀತಿ, Love

ಎಲ್ಲೆಲ್ಲೊ ಹುಡುಕಿದೆ ನಿನ್ನಾ
ನೀನೇಕೆ ಕಾಣದೆ ಕಾಡಿದೆ ನನ್ನಾ

ಜಗಕೆ ಒಲಿದೆಯಲ್ಲ ನೀನು
ನಿನಗೆ ಒಲಿದೆನಲ್ಲ ನಾನು
ಒಲಿದು ಬಂದ ನನ್ನ ನೀನು
ದೂರ ಮಾಡುವುದು ಸರಿಯೇನು

ನಿನ್ನಂತೆ ಸೆಳೆದವರ ಕಾಣೆನು
ಮದುರ ಮೋಹರಾಗ ನೀನು
ಒಲುಮೆಗೊಂದು ಹೆಸರು ನೀನು
ಮರೆತು ಹೇಗೆ ಇರಲಿ ನಾನು

ದೂರದ ಮಿನುಗು ತಾರೆ ನೀನು
ಬಳಿಗೆ ಬರಲು ದಾರಿ ಏನು
ಒಮ್ಮೆ ಬಂದು ನೋಡು ನೀನು
ನಿನ್ನ ಕಣ್ಣ ಬಿಂಬ ನಾನು

ಬಯಕೆ ಬಂದ ಮೀರಿ ನಾನು
ಮರೆತು ನಿಂತೆ ನನ್ನೆ ನಾನು
ಎದೆಯ ಗುಡಿಯ ದೀಪ ನೀನು
ದಿವ್ಯ ಕಾಂತಿ ಬೆಳಕು ನೀನು

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. savita kulkarni says:

    ಸೂಪರ್

  2. Raghuramu N.V. says:

    ತುಂಬ ಚೆನ್ನಾಗಿದೆ

  3. Guru Dhavaleshwar says:

    ವ್ಹಾಹ್ ಬಲು ಸುಂದರ ✍??

ಅನಿಸಿಕೆ ಬರೆಯಿರಿ: