ಹನಿಗವನಗಳು

– ವೆಂಕಟೇಶ ಚಾಗಿ.

*** ಲಸಿಕೆ ***

ಎಲ್ಲರೂ
ಪಣತೊಡಬೇಕು
ಕೊರೊನಾ ಓಡಿಸಲು
ಮತ್ತೆ ಬಾರದ ಜಗಕೆ
ಸಾಮಾಜಿಕ ಅಂತರದಿ
ಮಾಸ್ಕ್ ದರಿಸಿ
ಈಗಲೇ ಪಡೆಯೋಣ
ಲಸಿಕೆ

*** ಬಯ ***

ಏನೇ ಬರಲಿ
ಎದುರಿಸುವ ಚಲವಿರಲಿ
ಮತ್ತೇಕೆ ಬೇಕು ಬಯ
ದೈರ‍್ಯದಿಂದ
ಎಲ್ಲರೂ ಎದುರಿಸೋಣ
ಬದುಕಲಿರಲಿ
ನಿರ‍್ಬಯ

*** ಮಾಸ್ಕು ***

ಹೊರಗೆ ಹೋಗುವಾಗ
ಮುಕದ ಮೇಲಿರಲಿ
ವೈರಸ್ ತಡೆಯುವ ಮಾಸ್ಕು
ತಡೆದು ಬಿಡುವ ಈಗಲೇ
ಮುಂದಿನ ದಿನಗಳಲ್ಲಿ
ನಮಗೂ ನಿಮಗೂ ಬರುವ
ಬಹುದೊಡ್ಡ ರಿಸ್ಕು

*** ಕೊರೊನಾ ***

ಮಾನವ ಕುಲಕೆ
ಆದುನಿಕ ಶತ್ರು
ಕಣ್ಣಿಗೆ ಕಾಣದ ಕೊರೊನಾ
ನಮ್ಮಿಂದಲೇ ಹರಡದಂತೆ
ಮುಂಜಾಗ್ರತೆಯಿಂದಲಿ
ಎಚ್ಚರಿಕೆಯಿಂದ ಇರೋನಾ

*** ಸೌಬಾಗ್ಯ ***

ಬೂಮಿಯ ಮೇಲೆ
ಮಾನವರಾಗಿ ಜನಿಸುವುದೇ
ನಮ್ಮೆಲ್ಲರ ಸೌಬಾಗ್ಯ
ಬದುಕಿ ಬದುಕಲು ಬಿಡು
ಎನ್ನುವಂತೆ
ಸಕಲ ಜೀವಿಗಳಿಗೂ
ಸಿಗಲೇ ಬೇಕು
ಬದುಕುವ ಬಾಗ್ಯ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಸೊಗಸಾಗಿದೆ

ಅನಿಸಿಕೆ ಬರೆಯಿರಿ: