ಟೊಮೋಟೊ ಬಜ್ಜಿ
– ಸವಿತಾ.
ಬೇಕಾಗುವ ಸಾಮಾನುಗಳು
- ಟೊಮೋಟೊ – 3
- ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಬಟ್ಟಲು
- ಕತ್ತರಿಸಿದ ಪುದೀನಾ – ಅರ‍್ದ ಬಟ್ಟಲು
- ದೊಡ್ಡಪತ್ರೆ ಎಲೆ – 4 ಎಲೆ
- ಹಸಿಮೆಣಸಿನಕಾಯಿ – 4
- ಬೆಳ್ಳುಳ್ಳಿ ಎಸಳು – 4
- ಹಸಿ ಶುಂಟಿ – ಕಾಲು ಇಂಚು
- ಜೀರಿಗೆ – ಅರ‍್ದ ಚಮಚ
- ಸಕ್ಕರೆ – 1 ಚಮಚ
- ಉಪ್ಪು ರುಚಿಗೆ ತಕ್ಕಶ್ಟು
- ಕಾದ ಎಣ್ಣೆ – 1 ಚಮಚ
- ಕರಿಯಲು ಎಣ್ಣೆ
ಮಾಡುವ ಬಗೆ
ಟೊಮೋಟೊವನ್ನು ದುಂಡಿನಾಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ಕೊತ್ತಂಬರಿ ಸೊಪ್ಪು, ಪುದೀನಾ, ದೊಡ್ಡಪತ್ರೆ ಎಲೆ, ಹಸಿಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ ಎಸಳು, ಹಸಿ ಶುಂಟಿ, ರುಚಿಗೆ ತಕ್ಕಶ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ನುಣ್ಣಗೆ ಅರೆದು ಪೇಸ್ಟ್ ಮಾಡಿ. ನಂತರ ಟೊಮೋಟೊ ಹೋಳಿನ ಮೇಲೆ ಈ ಪೇಶ್ಟನ್ನು ಸ್ವಲ್ಪ ಹಚ್ಚಿ ಪ್ರಿಡ್ಜ್ ನಲ್ಲಿ ಅರ‍್ದ ಗಂಟೆ ಇಡಬೇಕು. ಇದೇ ಪೇಸ್ಟ್ ಇಂದ ಒಂದು ಚಮಚ ತಗೆದು ಕಡಲೇ ಹಿಟ್ಟಿನಲ್ಲಿ ಹಾಕಿ. ನಂತರ ಇದಕ್ಕೆ ಸಣ್ಣ ರವೆ, ಸ್ವಲ್ಪ ಉಪ್ಪು, ನೀರು, ಅಡುಗೆ ಸೋಡಾ ಹಾಕಿ ಕಲಸಿಟ್ಟುಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಒಂದು ಚಮಚ ಕಾದ ಎಣ್ಣೆಯನ್ನು ಹಿಟ್ಟಿಗೆ ಸೇರಿಸಿ ಕಲಸಿಟ್ಟುಕೊಳ್ಳಬೇಕು. ನಂತರ ಪ್ರಿಡ್ಜ್ ನಲ್ಲಿಟ್ಟ ಟೊಮೋಟೊ ಹೋಳು ತೆಗೆದಿಟ್ಟುಕೊಳ್ಳಿ. ಒಂದೊಂದೇ ಟೊಮೆಟೊ ಹೋಳನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹಾಕಿ ಕರಿದು ತೆಗೆಯಿರಿ. ಈಗ ಬಿಸಿ ಬಿಸಿ ಟೊಮೋಟೊ ಬಜಿ ಸವಿಯಲು ಸಿದ್ದ. ಸಾಸ್ ಜೊತೆ ಸವಿಯಬಹುದು.
ಇತ್ತೀಚಿನ ಅನಿಸಿಕೆಗಳು