ಸಬ್ಬಸಿಗೆ ಸೊಪ್ಪಿನ ವಡೆ

– ಸವಿತಾ.

ಬೇಕಾಗುವ ಸಾಮಾನುಗಳು

ಸಬ್ಬಸಿಗೆ ಸೊಪ್ಪು – 1 ಕಟ್ಟು
ಕಡಲೆ ಹಿಟ್ಟು – 2 ಬಟ್ಟಲು
ಹಸಿ ಶುಂಟಿ – 1/2 ಇಂಚು
ಹಸಿ ಮೆಣಸಿನ ಕಾಯಿ – 4
ಜೀರಿಗೆ – 1/2 ಚಮಚ
ಅಜೀವಾಯಿನ್/ಓಂ ಕಾಳು – 1/4 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಶ್ಟು
ಅರಿಶಿಣ ಪುಡಿ – ಸ್ವಲ್ಪ
ಎಣ್ಣೆ – 2 ಚಮಚ
ಎಳ್ಳು – 2 ಚಮಚ (ಬೇಕಾದರೆ)
ಕರಿಯಲು ಎಣ್ಣೆ

ಮಾಡುವ ಬಗೆ

ಒಂದು ಪಾತ್ರೆ ಯಲ್ಲಿ ಕಡಲೇ ಹಿಟ್ಟು ಹಾಕಿ, ಸಬ್ಬಸಿಗೆ ಸೊಪ್ಪು ತೊಳೆದು ಕತ್ತರಿಸಿ ಸೇರಿಸಿ. ಕೊತ್ತಂಬರಿ ಸೊಪ್ಪು ಕತ್ತರಿಸಿ ಸೇರಿಸಿ. ಹಸಿ ಮೆಣಸಿನ ಕಾಯಿ, ಹಸಿ ಶುಂಟಿ, ಜೀರಿಗೆ, ಓಂ ಕಾಳು, ಸ್ವಲ್ಪ ಉಪ್ಪು ಸೇರಿಸಿ ಅರೆದು ಹಾಕಿ. ಅರಿಶಿಣ ಪುಡಿ ಸೇರಿಸಿ, ಸ್ವಲ್ಪ ನೀರು ಹಾಕಿಕೊಂಡು ಗಟ್ಟಿ ನಾದಿಕೊಳ್ಳಿ. ಬೇಕಾದರೆ ಎಳ್ಳು ಹಾಕಿಕೊಳ್ಳಬಹುದು.

ಕೈಗೆ ಒಂದು ಚಮಚ ಎಣ್ಣೆ ಹಚ್ಚಿಕೊಂಡು ನಾದಿದ ಹಿಟ್ಟನ್ನು ರೋಲ್ ಮಾಡಿ ಒಂದು ಉದ್ದದ ಪಾತ್ರೆ ಅತವಾ ಲೋಟಕ್ಕೆ ಎಣ್ಣೆ ಸವರಿ ಅದರೊಳಗೆ ಇಡಬೇಕು. ಲೋಟವನ್ನು ಕುಕ್ಕರ‍್‍‌ನಲ್ಲಿಟ್ಟು ಒಂದು ಕೂಗು ಬರುವವರೆಗೆ ಕುದಿಸಿ ಇಳಿಸಿ.

ಆರಿದ ಬಳಿಕ ಗಾಲಿ ಹಾಗೇ ದುಂಡಗೆ ಕತ್ತರಿಸಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಈಗ ಸಬ್ಬಸಿಗೆ ಸೊಪ್ಪಿನ ವಡೆ ಸವಿಯಲು ಸಿದ್ದ. ಹಬ್ಬ ಹರಿದಿನ ಇಲ್ಲವೇ ಮಳೆಗಾಲದ ಚಳಿಗೆ ಬಿಸಿ ಬಿಸಿ ಸಬ್ಬಸಿಗೆ ಸೊಪ್ಪಿನ ವಡೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications