ಹಸಿರು ಮೊಟ್ಟೆ ಮಸಾಲೆ
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು
- ಮೊಟ್ಟೆ – 6
- ಈರುಳ್ಳಿ – 2
- ಚಕ್ಕೆ – 2 ಕಡ್ಡಿ
- ಲವಂಗ – 4
- ಏಲಕ್ಕಿ – 1
- ಅರಿಶಿಣ – 1/2 ಚಮಚ
- ಶುಂಟಿ – 1 ಇಂಚು
- ಹಸಿ ಮೆಣಸಿನ ಕಾಯಿ – 4-5
- ಕೊತ್ತಂಬರಿ ಸೊಪ್ಪು – 1/2 ಕಟ್ಟು
- ಬೆಳ್ಳುಳ್ಳಿ – 10 -12 ಎಸಳು
- ಪುದೀನ – 2 ಎಸಳು
- ಗೋಡಂಬಿ – 4
- ಕಾಳುಮೆಣಸು – 5-6
- ಉಪ್ಪು – ರುಚಿಗೆ ತಕ್ಕಶ್ಟು
- ಟೊಮೊಟೊ – 1
- ಎಣ್ಣೆ – 4-5 ಚಮಚ
ಮಾಡುವ ಬಗೆ:
ಮೊದಲಿಗೆ ಒಂದು ಹಂಚು ಅತವಾ ಬಾಣಲಿಯಲ್ಲಿ /ಬಾಂಡಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ 1 1/2 ಹೆಚ್ಚಿದ ಈರುಳ್ಳಿ, ಚಕ್ಕೆ, ಲವಂಗ, ಕಾಳಮೆಣಸು, ಏಲಕ್ಕಿ, ಕಾಲು ಚಮಚ ಅರಿಶಿಣ, ಕೊತ್ತಂಬರಿ ಸೊಪ್ಪು (ಚಿಕ್ಕದಾಗಿ ಕತ್ತರಿಸಿಕೊಂಡಿರಬೇಕು), ಹಸಿಮೆಣಸಿನಕಾಯಿ, 1/2 ಟೊಮೊಟೊ, ಗೋಡಂಬಿ, ಪುದೀನ, ಶುಂಟಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ 2 ನಿಮಿಶ ನಡು ಉರಿಯ ಬೆಂಕಿಯಲ್ಲಿ ಹುರಿದುಕೊಳ್ಳಿ. ಹೀಗೆ ಹುರಿದುಕೊಂಡ ಮೇಲೆ, ಒಂದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.ಈ ಗಸಿ ದಪ್ಪಗೆ ಬೇಕಾದಲ್ಲಿ ನೀರು ಕಡಿಮೆ ಹಾಕಿ.
ಈಗ ಜೊತೆ ಜೊತೆಗೆ, 6 ಮೊಟ್ಟೆಗಳನ್ನು ಒಂದು ಪಾತ್ರೆಯಲ್ಲಿ ಬೇಯಿಸಲು ಇಡಿ. ಬೇಕಿದ್ದಲ್ಲಿ ಚಿಟಿಕೆ ಉಪ್ಪು ಹಾಕಿಕೊಳ್ಳಿ. ಈಗ ಒಂದು ಪಾತ್ರೆಗೆ 4 ಚಮಚ ಎಣ್ಣೆ, 1/2 ಈರುಳ್ಳಿ, 1/2 ಟೊಮೊಟೊ, ಸ್ವಲ್ಪ ಅರಿಶಿಣ ಮತ್ತು ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಹುರಿದುಕೊಳ್ಳಿ. ಆಮೇಲೆ ಮಿಕ್ಸಿಯಲ್ಲಿ ಮಾಡಿದ ಗಸಿಯನ್ನು ಇದಕ್ಕೆ ಹಾಕಿ, ಸ್ವಲ್ಪ ನೀರು ಹಾಕಿ, ಬೇಯಿಸಿದ ಮೊಟ್ಟೆಗಳನ್ನು ಹಾಕಿ 10-15 ನಿಮಿಶ ಕುದಿಯಲು ಬಿಡಿ. ಬೇಕಿದ್ದಲ್ಲಿ ಬೇಯಿಸಿದ ಮೊಟ್ಟೆಗಳನ್ನು ಸ್ವಲ್ಪ ಎಣ್ಣೆಹಾಕಿ, ಕಾಳುಮೆಣಸಿನ ಪುಡಿ ಹಾಕಿ ಹುರಿದುಕೊಂಡಿಟ್ಟುಕೊಂಡು, ಆಮೇಲೆ ಅದನ್ನು ರುಬ್ಬಿಕೊಂಡ ಗಸಿಗೆ ಹಾಕಬಹುದು. ಹೀಗೆ ಕುದಿಸಿಕೊಂಡ ನಂತರ ಬಿಸಿ ಬಿಸಿ ಹಸಿರು ಮೊಟ್ಟೆ ಮಸಾಲೆ ತಯಾರಿದ್ದು, ಇದನ್ನು ಅಕ್ಕಿ ರೊಟ್ಟಿ, ಚಪಾತಿ ಮತ್ತು ನೀರು ದೋಸೆಯ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ.
( ಚಿತ್ರಸೆಲೆ: pexels.com )
ಇತ್ತೀಚಿನ ಅನಿಸಿಕೆಗಳು