ಹನಿಗವನಗಳು

– ವೆಂಕಟೇಶ ಚಾಗಿ.

*** ಕಪ್ಪು ***

ಇಂಡಿಯಾ
ಗೆಲ್ಲುತ್ತೋ ಇಲ್ಲವೋ
ವರ‍್ಡ್ ಕಪ್ಪು
ಪ್ರತಿ ಪಂದ್ಯ ನಡೆದಾಗ
ಕಾಲಿ ಆಗುತ್ತವೆ
ನಾಲ್ಕೈದು ಟೀ ಕಪ್ಪು

*** ಬಹುಮಾನ ***

ಪಂದ್ಯ ಗೆದ್ದವರಿಗೆ
ಪಂದ್ಯದ ಕೊನೆಗೆ ಸಿಗುತ್ತೆ
ಹಣ ಬಹುಮಾನ
ಅಬಿಮಾನಿಗೆ ಮಾತ್ರ
ದಾರಾವಾಹಿ ನೋಡಲಾಗದ
ಹೆಂಡತಿಯಿಂದ ಅವಮಾನ

*** ಬ್ರೇಕ್ ***

ಎರಡು ನಿಮಿಶ
ಮಾತುಕತೆ ನಡೆದಿರಲ್ಲ
ಪಡೆಯುತ್ತಾರೆ ಬ್ರೇಕು
ಟಿವಿಯಲ್ಲಿ;
ಗಂಟೆ ಗಂಟೆಗಳಶ್ಟು
ಮಾತನಾಡಿದರೂ
ಬ್ರೇಕು ಬೇಕಾಗಿಲ್ಲ
ನಮ್ಮನೆ ವಟಾರದಲ್ಲಿ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *