ಚುಟುಕುಗಳು

– ಕಿಶೋರ್ ಕುಮಾರ್.

***ಮುನಿಸು***

ಯಾರ ಮೇಲೆ ಮುನಿಸು
ಬಳಲುತಿದೆ ಮನಸು
ತೆಗೆದಿಟ್ಟರೆ ಈ ಮುನಿಸು
ಎಲ್ಲರ ಬಾಳೂ ಸೊಗಸು

 

***ಬವಣೆ***

ನೆನ್ನೆಯದೂ ಬವಣೆ
ನಾಳೆಯದೂ ಬವಣೆ
ಇಂದು ಅದ ನೆನೆಯಬೇಡ
ಇರುವ ಈ ದಿನವ ನೋಡ

 

***ಕುರಿ***

ಅವ ಮಾಡಿದ ಇವ ಮಾಡಿದ
ಎಂದು ನೀ ಜಿಗಿವೆಯ ಕುರಿಯೆ
ನಿನಗೆಂದು ಸ್ವಂತಿಕೆ ಇಲ್ಲವೇ
ನಿನಗೆಂದು ಒಂದು ಮೆದುಳಿಲ್ಲವೇ?

 

***ದುಗುಡ***

ಬಿಡಬೇಡ ಮನಸ ದುಗುಡದೆಡೆಗೆ
ಅದು ದೂಡುವುದು ನಿನ್ನನು ಕೆಳಗೆ
ಏನೆ ಬಂದರು ನಿನ್ನೆಡೆಗೆ
ಬಿಡದೆ ಮುನ್ನಡೆ ಹರುಶದೆಡೆಗೆ

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: