ಕವಿತೆ: ಓ ನಲ್ಲೆ
ಓ ಪ್ರಿಯತಮೆ ನೀ ನನ್ನ ಕಂಗಳು
ನಿನ್ನ ಹಿಂದೆ ಸುತ್ತುವೆ ಎಲ್ಲಾ ದಿನಗಳು
ಸಾಕು ನಿನ್ನ ಒಲವು ನನಗೆ ಬೊಗಸೆಯಶ್ಟು
ಪುನಹ ನಾನು ಕೊಡುವೆ ಪ್ರೀತಿ ಬೆಟ್ಟದಶ್ಟು
ನೀನೆ ಕಾಪಾಡು ದೇವ್ರೆ ಮನಸುಕೊಟ್ಟು
ಹೊತ್ತು ಕಳೆದರೂ ಇನ್ನೂ ನಿದ್ರೆ ಬಾರದೆ
ಕಾಯುತಿರುವೆ ನಾನು ಕನಸು ಕಣ್ಣ ಸೇರದೆ
ಏನು ಅರ‍್ತವಾಗದೇನೆ ಮಂಕಾದೆನು
ನಿನ್ನ ನೆನಪಿನಲ್ಲೇ ಈಗ ಕಳೆದು ಹೋದೆನು
ಕನಸೇ ಬೇಗ ಬಂದು ಸೇರು ನನ್ನ ಕಣ್ಣನು
ನನ್ನ ನೆನಪಿನಲ್ಲಿ ಬಂದು ನೀ ಕಾಡುವೆ
ನಮ್ಮ ಪ್ರೇಮಕೆ ಬೇಕೊಂದು ಸೇತುವೆ
ಕಟ್ಟೋಣ ಬಾರೆ ಜೊತೆಗೆ ಸೇರಿ ನಾವು
ಮುರಿಯದಂತೆ ನನ್ನ ನಿನ್ನ ಸಾಮರಸ್ಯವು
ಬಾರದಿರಲಿ ಪ್ರೇಮದಲ್ಲಿ ವೈರಾಗ್ಯವು
ಕೋಪದಲ್ಲಿ ನೀನು ಸುಂದರಾಂಗಿಯು
ಕೊಡಿಸುವೆ ನಿನಗೆ ಚಿನ್ನ ಬೆಳ್ಳಿಯು
ಕರುಣೆ ತೋರಬೇಕು ನೀನೆ ನನ್ನ ದೇವಿಯು
ನಿನ್ನ ಮೇಲೆ ನನಗೆ ಬೆಟ್ಟದಶ್ಟು ಪ್ರೀತಿಯು
ಅರಳಿ ಮುದುಡದಿರಲಿ ನಮ್ಮ ಪ್ರೇಮ ಬಕ್ತಿ ಹೂ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು