ಹನಿಗವನಗಳು

– ವೆಂಕಟೇಶ ಚಾಗಿ.

*** ಆಹಾರ ***

ಆಹಾರಕ್ಕಾಗಿ
ಬಂದ ಪ್ರಾಣಿ
ಆಹಾರವಾಯ್ತು

*** ಕರ ***

ಹಗಲಿನ ಬೆಳಕಿಗೂ
ಕರ ತುಂಬುವ ಕಾಲ
ಬರದೇ ಇರದು

*** ತಿದ್ದುಪಡಿ ***

ಕೊಟ್ಟ ಮಾತಿಗೂ
ಆಗಾಗ
ತಿದ್ದುಪಡಿ ಆಗುತ್ತದೆ

*** ಜಗಳ ***

ತಪ್ಪು
ಒಪ್ಪಿಕೊಳ್ಳದಿದ್ದಕ್ಕೆ
ಜಗಳವಾಗುತ್ತಿದೆ

*** ದರ‍್ಮ ***

ದರ‍್ಮಕ್ಕಾಗಿ
ದೇವರನ್ನೇ
ಮರೆಯಲಾಗಿದೆ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: