ಹೋದೆ ದೂರ ಎಲ್ಲಿಗೆ

ಪದ್ಮನಾಬ.

ಹ್ರುದಯವನ್ನು ಸೆಳೆದು ನೀನು
ಹೋದೆ ದೂರ ಎಲ್ಲಿಗೆ
ಕಂಗಳಲ್ಲೇ ಕವಿತೆ ಹಾಡಿ
ಮಾಯವಾದೆ ಹೀಗೇತಕೆ

ಬಾಳಬಂಡಿ ಕನಸಿನೂರಿನ
ಹಾದಿಯಲ್ಲೇ ಚಲಿಸಿದೆ
ತನ್ನ ಗುರಿಯ ತಲುಪಲೀಗ
ನಿನ್ನ ಜೊತೆಯ ಬೇಡಿದೆ
ಕನಸೊ ನನಸೋ
ಬ್ರಮೆಯೊ ಬದುಕೋ
ಮನಸು ನಿನ್ನನೇ ಬಯಸಿದೆ

ದೂರವಿರುವ ತೀರವೊಂದು
ನಮ್ಮ ಬರುವ ಕಾದಿದೆ
ನಿನ್ನ ಒಲವ ಬಲವೆ ನಮ್ಮ
ನೌಕೆ ನಡೆಸಲು ಬೇಕಿದೆ
ನೀನು ಬರದೆ ಚಂದ್ರಬಿಂಬ
ಅಲೆಯಲೇ ತಾ ಕರಗಿದೆ
ತಾರೆಯೇಕೋ ಸೊರಗಿದೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Ganesh Mayya says:

    ?

  2. ಅಭೀಷೆಕ್. ಕ. ಕಟ್ಟಿಮನಿ says:

    ತುಂಬಾ ಸುಂದರವಾಗಿದೆ ನಿವು ಇನ್ನೂ ಚೆನ್ನಾಗಿ ಬರೆಯಲು ಪ್ರಯತ್ನಮಾಡಿ

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *