ಅಡುಗೆಮನೆ ಗುಟ್ಟುಗಳು

– ಬವಾನಿ ದೇಸಾಯಿ.

ಅಡುಗೆ ಮನೆಯಲ್ಲಿ ಕಿರಿಕಿರಿ ಎನಿಸಬಹುದಾದು ಹಲವು ಕೆಲಸಗಳಿಗೆ ಇಲ್ಲಿವೆ ಸಕ್ಕತ್ ಉಪಾಯಗಳು.

  • ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ತುಂಬ ಸಾಹಸ ಪಡದಿರಿ, ಬೆಳ್ಳುಳ್ಳಿಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಸುಲಬವಾಗಿ ಸಿಪ್ಪೆ ತೆಗೆಯಿರಿ.

  • ತುಟ್ಟಿಯಾದಾಗ ಈರುಳ್ಳಿ ಕೊಳ್ಳಬೇಕಾದರೆ ಕಣ್ಣೀರು ಓಕೆ, ಕತ್ತರಿಸಬೇಕಾದ್ರೆ ಯಾಕೆ..? ಸಿಪ್ಪೆ ತೆಗೆದು, ಎರಡು ಬಾಗ ಮಾಡಿ ಒಂದೆರಡು ನಿಮಿಶ ನೀರಿನಲ್ಲಿಟ್ಟು, ನಂತರ ಕತ್ತರಿಸಿ. ಹೀಗೆ ಮಾಡಿದರೆ ಕಣ್ಣೀರು ಬರದು.
  • ಇರುವೆ ಮತ್ತು ಸಕ್ಕರೆಯ ನಂಟು ಕಂಡರೆ ತುಂಬಾ ಕಿರಿಕಿರಿಯೇ? ಒಂದೆರಡು ಲವಂಗದ ತುಂಡುಗಳನ್ನ ಸಕ್ಕರೆಯ ಡಬ್ಬಿಯಲ್ಲಿ ಇಡಿ. ಅಲ್ಲಿಗೆ ಇರುವೆಗಳು ತಲೆಹಾಕುವುದೂ ಇಲ್ಲ.

  • ಸಕ್ಕರೆಯ ಪಾಕ ತಣ್ಣಗಾದ ಮೇಲೆ ಹರಳಾಗುವುದನ್ನು ತಡೆಯಲು, ಪಾಕಕ್ಕೆ ಒಂದು ಚಮಚ ನಿಂಬೆರಸ ಸೇರಿಸಿ.

  • ಹೆಪ್ಪು ಹಾಕಲು ಮೊಸರು ಇಲ್ಲವೇ? ಬೆಚ್ಚಗಿನ ಹಾಲಿಗೆ ಒಂದು ಮೆಣಸಿನಕಾಯಿಯನ್ನು ನಡುವೆ ಸೀಳಿ ಹಾಕಿ. ಹಾಂ ಹಾಗೆನೇ, ಹಾಲು ಕಾಯಿಸಬೇಕಾದ್ರೆ ಸ್ವಲ್ಪ ಹಾಲಿನ ಪೌಡರ್ ಹಾಕಿ, ಮೊಸರು ಗಟ್ಟಿಯಾಗಿ ಚೆನ್ನಾಗಿರುತ್ತೆ.
  • ಮನೇಲಿ ಹಲ್ಲಿಗಳ ಕಾಟ ಹೆಚ್ಚಾಗಿದೆಯಾ? ಹಾಗಿದ್ರೆ, ಸ್ವಲ್ಪ ಕಾಪೀ ಪುಡಿ ಮತ್ತು ತಂಬಾಕು ಸೇರಿಸಿ, ಸಣ್ಣ ಉಂಡೆಗಳನ್ನು ಮಾಡಿ ಮೂಲೇಲಿ ಇಡಿ, ಹಲ್ಲಿಗಳಿಗೆ ಅದು ರಾಮಬಾಣ.

  • ಬಾಳೆಹಣ್ಣಿನ ತುಂಬುಗಳನ್ನ ಅಲ್ಯೂಮಿನಿಯಂ ಹಾಳೆಯಿಂದ ಸುತ್ತಿಡಿ, ಹಣ್ಣು ಬೇಗ ಹಾಳಾಗಲ್ಲ.
  • ಅಡುಗೆಮನೆಯ ಸಿಂಕ್ ತುಂಬಾ ಗಲೀಜು ಅನಿಸ್ತಾ ಇದ್ಯಾ..? ಸ್ವಲ್ಪ ಕರ‍್ಪೂರ ಉಪಯೋಗಿಸಿ, ವಾಸನೆ ಬರದು, ಹುಳುಗಳೂ ಇರವು.

  • ಹಣ್ಣು & ತರಕಾರಿಗಳನ್ನು ತಿನ್ನುವ ಮೊದಲು ಒಂದು ಲೀಟರ್ ನೀರಿಗೆ ಒಂದು ಚಮಚ ಅಡುಗೆ ಸೋಡಾ ಹಾಕಿ ತೊಳೆದು ಇಟ್ಟುಕೊಳ್ಳಿ, ಕೀಟನಾಶಕಗಳಿಂದಾಗುವ ಪರಿಣಾಮಗಳನ್ನು ತಗ್ಗಿಸಿ.
  • ಬೇಳೆಕಾಳುಗಳ ಜೊತೆಗೆ ಸ್ವಲ್ಪ ಲವಂಗದ ಎಲೆ / ಒಣಗಿದ ಬೇವಿನ ಎಲೆಗಳನ್ನು ಸೇರಿಸಿ ಮತ್ತು ಹುಳುಗಳಾಗುವುದನ್ನು ತಡೆಯಿರಿ.

(ಚಿತ್ರ ಸೆಲೆ: unsplash.com, publicdomainpictures.netwikimedia1wikimedia2pixabaypixabay2)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *