ಕವಿತೆ : ಕಿಟಕಿ ಬಾಗಿಲುಗಳಿಲ್ಲದ ಮಣ್ಣ ಮಂಟಪದಲ್ಲಿ

 ದ್ವಾರನಕುಂಟೆ ಪಿ. ಚಿತ್ತನಾಯಕ.

ಕಿಟಕಿ ಬಾಗಿಲುಗಳಿಲ್ಲದ
ಮಣ್ಣ ಮಂಟಪದಲ್ಲಿ
ಕುಳಿತಿರುವ ಬಂದುಗಳೆ
ನೀವುಗಳು ಪಾತ್ರದಾರಿಗಳು
ಮುಗಿದು ಮಣ್ಣಾದ ರಾಮಾಯಣ ಮಹಾಬಾರತದ
ಕಾವ್ಯಗಳಿಗೆ, ಕತೆಗಳಿಗೆ, ಶ್ಲೋಕಗಳಿಗೆ, ಉಕ್ತಿಗಳಿಗೆ

ದ್ರವವಾದಿರೊ ಗನವಾದಿರೊ ಅನಿಲವಾದಿರೊ
ಮಣ್ಣಲ್ಲಿ ಮಣ್ಣಾದಿರೊ
ಅಂತೂ ಮಹಾಯುದ್ದಗಳ ಮಾಡಿ
ನಿಮ್ಮ ದುರ‍್ವಿದಿಯ ಪಾಟ ಬಿಟ್ಟು ಹೋದಿರಿ

ನಾವು ಕೇಳುತ್ತೇವೆ
ಕಿವಿಗಳಿಗೆ ಅಗಳಿ ಜಡಿವವರೆಗೆ
ನಾವು ನೋಡುತ್ತೇವೆ
ಕಣ್ಣಿಗೆ ಮಬ್ಬು ಮುತ್ತುವವರೆಗೆ
ಕೈ ಕೈ ಮಿಲಾಯಿಸಿ
ನಿಮ್ಮತ್ತ ನಡೆಯುತ್ತೇವೆ
ಇನ್ನೂ ತೀರಿಲ್ಲ ಆತ್ಮ ಬವ
ನಿಮ್ಮೊಡನೆ ಇದ್ದಿದ್ದು ನಮ್ಮೊಡನೆ ಜನಿಸಿದೆ

ಎದುರಿಗಿದ್ದವನೊಡನೆ ನಗುವಿನಂತೆ
ಪಕ್ಕಕ್ಕೆ ಸರಿದ ಪಕ್ಕದವರ ಇರಿಯುವಂತೆ
ಜಗವನ್ನು ಮತ್ತೆ ಮತ್ತೆ ಸುಡುವ
ಕಿಚ್ಚಿನ ಕುಡಿಕೆಯಂತೆ ನಾವಿದ್ದೇವೆ
ನಾವು ಸತ್ತವರ ಪ್ರತಿಕ್ರುತಿಗಳು
ಇದ್ದವರ ಬಂದು ಬಾಂದವರು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *