ಬೆಳಗಾವಿ

ಜಯತೀರ‍್ತ ನಾಡಗವ್ಡ

 

ದಿನೇ ದಿನೇ ಹೆಚ್ಚುತ್ತಿದೆ ಎಮ್.ಈ.ಎಸ್-ಶಿವಸೇನೆಗಳ ಪುಂಡಾಟಿಕೆ
ನಡೆಸುವರು ಕರ‍್ನಾಟಕದಲ್ಲೇ ಕನ್ನಡ ವಿರೋದಿ ಚಟುವಟಿಕೆ
ಜ್ನಾನಪೀಟ ಕಂಬಾರರಿಗೆ ಮಾಡಿದರು ಅವಮಾನ
ಕನ್ನಡಿಗರ ಹಬ್ಬ ರಾಜ್ಯೋತ್ಸವ ಇವರಿಗೆ ಕರಾಳದಿನ
ಶಾಂತ ಮನಸಿನ ಕನ್ನಡಿಗರಿಗೆ ತೋರಿದರು ಕೆರ
ಇಶ್ಟಾದರೂ ನಮ್ಮ ಆಳ್ವಿಗರು ಈ ಪುಂಡರ ಪರ
ಕರುನಾಡಲ್ಲೇ ಸುಟ್ಟರು ಕರ‍್ನಾಟಕದ ಬಾವುಟ
ಶಾಂತಿಯನ್ನು ಕದುಡುವುದೇ ಇವರ ದುಶ್ಚಟ
ಮಾಡುವರಂತೆ ಕರ‍್ನಾಟಕದ ಅಂತಿಮ ಸಂಸ್ಕಾರ
ಇದೆಲ್ಲ ನೋಡುತಾ ಸುಮ್ಮನಿದೆಯಲ್ಲ ನಮ್ಮ ರಾಜ್ಯ ಸರ‍್ಕಾರ!
ಪದೇ ಪದೇ ನಡೆಯುತ್ತಿದೆ ಬೆಳಗಾವಿಯಲ್ಲಿ ಗಲಬೆಕೋರರ ತಂಟೆ
ಕನ್ನಡಿಗರ ಪಾಲಿಗಿದೋ ಎಚ್ಚರಿಕೆಯ ಗಂಟೆ
ಇನ್ನಾದರೂ ನಮ್ಮ ಆಳ್ವಿಗರು ಇದನ್ನು ತಡೆಯುವರುಂಟೇ?
ಎಂದೆಂದಿಗೂ ಕರ‍್ನಾಟಕದ ಬಾಗ ಯಳ್ಳೂರು
ಇಲ್ಲಿಂದಲೇ ಬಿಡಿ ನಾಡದ್ರೋಹಿಗಳಿಗೆ ಎಳ್ಳುನೀರು

(ಚಿತ್ರ: http://kannada.oneindia.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: