ಬಾವ ತರಂಗ

– ಸುರಬಿ ಲತಾ.

love2

ಮ್ರುದು ಬಾವದ ಮದುರ ಗೀತೆ ನೀನು
ನಿನ್ನ ನೋಡಿ ನಲಿದೆ ನಾನು

ಅಪಸ್ವರವು ಇರದು ಎಂದೂ ನಿನ್ನಲಿ
ಪ್ರೀತಿಯ ಚಿಲುಮೆ ಕಂಡೆ ಕಣ್ಣಲಿ

ಮಾತು ಅತೀ ಮದುರ
ಅದಕ್ಕೆಂದೇ ನಿನ್ನಲಿ ಸದರ

ಬಳಿ ಬರಲೇಕೆ ಆತುರ
ತಬ್ಬಲೇಕೆ ಇಶ್ಟು ಕಾತುರ

ನದಿ ಸೇರುವುದು ಕಡಲನ್ನು
ನಾ ನಿನ್ನ ಬೆರೆಯುವುದು ನಿಜವಿನ್ನು

ಸೇರಲಿಬ್ಬರ ಸವಿ ಮನ
ಮೊಳಗಿತು ಪ್ರೇಮ ಗಾನ

(ಚಿತ್ರ ಸೆಲೆ: ustaellerden.com )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: