ಇಲ್ಲಿವೆ 10 ‘ಚುಟುಕು ಓಲೆಗಳು’

– ಪ್ರತಿಬಾ ಶ್ರೀನಿವಾಸ್.

image

(1)
ನನ್ನದಲ್ಲದ ವಸ್ತುವಿಗೆ ಆಸೆ ಪಡಬಾರದು ಎನ್ನುವ ನೀನು!
ನಿನ್ನದಲ್ಲದ ಈ ನನ್ನ ಮನಸಿನಲ್ಲಿ ಕುಳಿತಿರಲು ಕಾರಣವೇನು?

(2)
ನಿನ್ನ ಕಣ್ಣಂಚಿನ ಮಿಂಚಿನಿಂದ ನನ್ನೀ ಮನವು ಚಲಿಸುತ್ತಿದ್ದರಿಂದ
ನೀ ಅಗಲಿದಾಗ ಏಕಾಂತತೆಯ ಕಾರಿರುಳು ನನ್ನ ಕಾಡಿದ್ದು.

(3)
ನಿನ್ನ ಮರೆಯಲೆಂದೇ ಯಾವುದಾದರೂ ಔಶದಿ ಇದ್ದಲ್ಲಿ, ಅದನ್ನೇ ನಾ ಮುದ್ದಿಸುತ್ತಿದ್ದೆ!

(4)
ಬಣ್ಣಗಳರಿಯದ ಶೂನ್ಯ ಮನಸ್ಸಿಗೆ, ಕಾಮನ ಬಿಲ್ಲಿನ ಕತೆಯೇಕೆ?

(5)
ಹೇ ಮನಸೇ ನೀ ಒಬ್ಬರಿಗೆ ವಂಚಿಸಿದರೆ, ವಂಚನೆಗೊಳಗಾಗುವ ಮುಂದಿನ ಸರದಿ ನಿನ್ನದೇ. ಸಿದ್ದನಾಗು

(6)
ಜೀವನವೆಂಬ ಈ ನನ್ನ ಪುಸ್ತಕದಲ್ಲಿ ಪೀಟಿಕೆಯು ನೀನೆ! ಮುಕ್ತಾಯವು ನೀನೆ!

(7)
ಕಣ್ಣಂಚಿನಲ್ಲಿ ಕಣ್ಣೀರು ಬರುವಾಗ, ತುಟಿಯಂಚಿನಲ್ಲಿ ನಗು ತರಿಸುವವರೇ ನಿಜವಾದ ಗೆಳೆಯರು.

(8)
ಹೂವಿನಂತ ಮ್ರದು ಸ್ವಬಾವದವಳಾಗಿರಬಹುದು ಎಂದುಕೊಂಡು ಬಂದೆ
ಹೂವಿನ ಜೊತೆ ಮುಳ್ಳುಗಳಿರುವುದ ಅರಿಯದೆ!

(9)
ನೀನಾಗೆ ಕೊಟ್ಟ ಪ್ರೀತಿಯ ಉಳಿಸಿಕೊಂಡು ನಾ ನಂಬಿಕೆಗೆ ಅರ‍್ಹಳಾದೆ.
ಅದೇ ಪ್ರೀತಿಯ ಅರ‍್ದಕ್ಕೆ ಬಿಟ್ಟು ಹೋಗಿ ನೀ ನಂಬಿಕೆ ದ್ರೋಹಿಯಾದೆ.

(10)
ಇನ್ನೂಬ್ಬರಿಗೆ ವಂಚಿಸಿ, ಮೋಸಮಾಡಿ ಅವರ ಕಣ್ಣೀರಿಗೆ ಕಾರಣವಾಗುವ
ಮನುಶ್ಯ ಎಶ್ಟೇ ದೇವರನ್ನು ನಂಬಿ ಪೂಜಿಸಿದರೂ ಅದು ನಿಶ್ಪ್ರಯೋಜಕ.

(ಚಿತ್ರಸೆಲೆ: wallpaperscraft.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: