ಮಲೆನಾಡು ಶೈಲಿ ಕುರಿಮಾಂಸದ ಸಾರು

ರೇಶ್ಮಾ ಸುದೀರ್.

kuri_saaru

ಬೇಕಾಗುವ ಪದಾರ‍್ತಗಳು:

ಕುರಿಮಾಂಸ ——- 1 ಕೆ.ಜಿ
ತೆಂಗಿನಕಾಯಿ —— 1
ನೀರುಳ್ಳಿ ———- 2(ದೊಡ್ಡ)
ಟೊಮಟೊ ——– 1(ದೊಡ್ಡ)
ಹಸಿರುಮೆಣಸಿನಕಾಯಿ — 20
ದನಿಯಪುಡಿ ——— 1 ಟೀ ಚಮಚ
ಬೆಳ್ಳುಳ್ಳಿ ———— 1 ಗೆಡ್ಡೆ
ಶುಂಟಿ ————- 1/4 ಇಂಚು
ಕೊತ್ತಂಬರಿಸೊಪ್ಪು —— 1 ಕಟ್ಟು
ಚಕ್ಕೆ ————– 1 ಇಂಚು
ಲವಂಗ ———— 2
ಏಲಕ್ಕಿ ————- 2
ಚಕ್ರಮೊಗ್ಗು ———- 1 ಎಸಳು
ಮರಾಟಿಮೊಗ್ಗು ——- 1
ಎಣ್ಣೆ ————– 1 ಟೆಬಲ್ ಚಮಚ

ಮಾಡುವ ವಿದಾನ:

ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿಮಾಡಿಕೊಳ್ಳಿ, ಹೆಚ್ಚಿಕೊಂಡ 1 ಗೆಡ್ಡೆ ನೀರುಳ್ಳಿ, ಬೆಳ್ಳುಳ್ಳಿ ಹಾಗು ಹಸಿರುಮೆಣಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಚಕ್ರಮೊಗ್ಗು ಹಾಗು ಮರಾಟಿ ಮೊಗ್ಗನ್ನು ಹಾಕಿ ಸಲ್ಪ ಹೊತ್ತು ಹುರಿಯಿರಿ. ದನಿಯಪುಡಿಯನ್ನು ಹಾಕಿ 2 ನಿಮಿಶ ಬಾಡಿಸಿ ಇಳಿಸಿ. ರುಬ್ಬುವಾಗ ಚಿಟಿಕೆ ಅರಿಸಿನ, ಕೊತ್ತಂಬರಿಸೊಪ್ಪು ಮತ್ತು ಶುಂಟಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತುರಿದ ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.

1 ನೀರುಳ್ಳಿ, 1 ಟೊಮಟೊವನ್ನು ಹೆಚ್ಚಿಕೊಳ್ಳಿ. ಪ್ರೆಶರ್ ಕುಕ್ಕರ್ ಗೆ 2 ಟೀ ಚಮಚ ಎಣ್ಣೆಯನ್ನು ಹಾಕಿ ಹೆಚ್ಚಿಕೊಂಡ ನೀರುಳ್ಳಿ ಹಾಗು ಟೊಮಟೊವನ್ನು ಹಾಕಿ ಬಾಡಿಸಿ, ಶುಚಿಮಾಡಿದ ಮಾಂಸವನ್ನು ಹಾಕಿ ಸಲ್ಪ ಉಪ್ಪುಹಾಕಿ ಮಾಂಸದ ನೀರು ಮೇಲೆ ಬರುವವರೆಗೆ ಬೇಯಿಸಿ. ನಂತರ 1 ದೊಡ್ದ ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ 4-5 ವಿಶಲ್ ಬರಿಸಿ. ಮಾಂಸ ಬೆಂದ ನಂತರ ರುಬ್ಬಿ ಇಟ್ಟುಕೊಂಡ ಕಾರ ಮತ್ತು ಕಾಯಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಬೇಕಿದ್ದರೆ ಉಪ್ಪು ಹಾಗು ಹುಳಿಯನ್ನು ರುಚಿಗೆ ಅನುಸಾರವಾಗಿ ಸೇರಿಸಿ. ಕುರಿಮಾಂಸದ ಸಾರು ತಯಾರಾಯಿತು. ಮಲೆನಾಡಿನಲ್ಲಿ ಕಡುಬು, ಶಾವಿಗೆ ಮತ್ತು ರೊಟ್ಟಿಯೊಂದಿಗೆ ಈ ಸಾರು ಮಲೆನಾಡಿನ ಮಾಂಸಾಹಾರಿಗಳಿಗೆ ಬಹಳ ಇಶ್ಟವಾದದ್ದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: