ಮರ ಹಂತಕರು

– ಕೌಸಲ್ಯ.

woodcutter

ವಸಂತದ ಆಗಮನ
ಗರ‍್ಬದ ಸಂಚಲನ
ನಾ ಏನಂ ಮಾಡಲಿ
ಬಸಿರ ನೂಕುವ ಸಮಯ

ನೋವದು ತಾಳಲಾರೆ
ಗರ‍್ಬದ ನೋವಲ್ಲ
ಶಿಶುವನ್ನು ಕೊಲ್ಲುವರಿಹರು

ಮರಣದ ಶಯ್ಯೆಯಲಿ
ಮಲಗಿಹರು ಎನ್ನ
ಕಂದಮ್ಮಗಳು
ಕರುಣೆಯನ್ನು ಕಾಣದ ನರರು

ಹಣದಾಸೆಗೆ ಒಲಿದ ಮರುಳರು
ಕತ್ತರಿಸಿ ತುಂಡರಿಸಿ ಸಾಗಿಸಿದರು
ಎನ್ನ ಕರುಳ ಬಳ್ಳಿಗಳ

ನಿದಿರೆಯು ಇಲ್ಲದೆ
ಮತ್ತಾವಾಗ ಬಂದಾರು ಉಳಿದ
ಹಸುಳೆಗಳ ಬಗೆಯಲು
ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಬಿಡದ
ಮರಬಕ್ಶಕರು

ಬಸಿರ ಎಳೆಕೂಸಿಗೆ
ಅದೇ ನರಕವು
ಅಮ್ಮಂಗೆ ಇತ್ತ ಆಣೆಯ ಪಾಲಿಸಿಹೆನು
ಸತ್ಯದ ನುಡಿಯನು ಬಿಡೆನು

ಮಾರಣಹೋಮಕ್ಕಂಜಿ
ಹಡೆಯದೆ ಬಂಜೆಯಾಗುಳಿದರೆ
ಜಗದ ಉಳಿವಿಗೆ ಇತ್ತ ಆಣೆ
ಕೊಟ್ಟ ಬಾಶೆಗೆ ದ್ರೋಹವನ್
ಬಗೆದಂತೆ

ಚರಿತ್ರೆಯ ವಚನಬ್ರಶ್ಟತೆ
ಎನಗೆ ಬಪ್ಪುದು
ಶತಕುರುವಂಶದಲಿ
ಉಳಿದದು ಶೂನ್ಯ

ಸಹಸ್ರದಲಿ ದಶವುಳಿದರೂ
ಸರಿಯೇ ಕಂದಮ್ಮಗಳು
ಇತ್ತ ಆಣೆಯ ಸತ್ಯ ಸ್ವರ‍್ಗ ಪ್ರಾಪ್ತಿಯು

( ಚಿತ್ರ ಸೆಲೆ: olx.co.za )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: