ಸಣ್ಣ ಹಣತೆಯೊಂದು ಮನವ ಸೆಳೆದಿದೆ

– ಅಂಕುಶ್ ಬಿ.

ಯಾಕೋ ಒಂದು ಸಣ್ಣ ಹಣತೆ
ನನ್ನ ಮನವ ಸೆಳೆದಿದೆ
ಮನೆಗೆ ಬೆಳಕ ನೀಡುವಂತೆ
ಮನಕೆ ಮುದವ ನೀಡಿದೆ

ಕಗ್ಗತ್ತಲನು ನೂಕಿ ಆಚೆ
ಹೊಸಬೆಳಕನು ತಂದಿದೆ
ಆ ಸೂರ‍್ಯಕಾಂತಿ ಬೆಳಕಿನಲ್ಲೆ
ಹೊಸ ಕನಸು ಚಿಗುರೊಡೆದಿದೆ

ಕತ್ತಲೆಯ ತವರು ಕೆಳಗೆ
ಹೊನಲು ಬೆಳಕ ನಗೆಯು ಹೊರಗೆ
ತಾನು ಕರಗುತ್ತಿದ್ದರೇನು
ತಮವ ಕಳೆದ ಚೆಲುವಿದೆ

ಯಾವ ಮಣ್ಣಿನಾ ಹಣತೆ
ಯಾರೋ ಕೂಡಿಟ್ಟು ಕೊಟ್ಟ ಎಣ್ಣೆ
ಯಾರೋ ಹೊಸೆದ ಬತ್ತಿಯು
ಮನದ ಕೊಳಕು ತೆಗೆದಿದೆ

(ಚಿತ್ರ ಸೆಲೆ: avadhimag.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: