ನಾವೇನು ತಪ್ಪು ಮಾಡಿದ್ದೆವು?

– ಕರಣ ಪ್ರಸಾದ.

naanyagalu

ನಾವು ಎಶ್ಟೇ ಬೇಡಿಕೊಂಡರು ನಮ್ಮ ದನಿ ನಿಮಗೆ ತಲುಪಲಿಲ್ಲಾ
ಅಯ್ಯ! ಅಪ್ಪಾ! ಅಂತ ಬೇಡಿಕೊಂಡೆವು ಕಾಲಿಗೆ ಬಿದ್ದೆವು
ಇನ್ನೂ ಕೆಲವು ದಿನಗಳಾದರೂ ನಾವು ನಿಮ್ಮ ಸೇವೆಯನ್ನ ಮಾಡಬಯಸಿದ್ದೆವು
ಆದರೂ ನಮ್ಮನ್ನ ನೀವು ಕಸವೆಂದು ಬಾವಿಸಿ ನಮ್ಮ ಕಡೆ ಮುಕ ಎತ್ತಿ ಕೂಡ ನೋಡಲಿಲ್ಲ

ನಮ್ಮನ್ನ ತ್ರುಣಕ್ಕೆ ಸಮಾನವಾಗಿ ನೋಡಿದಿರಿ
ನಾವೇನು ತಪ್ಪು ಮಾಡಿದ್ದೆವು? ನಾವು ನಿಮ್ಮ ಸೇವೆಗೆ ಸದಾ ಇದ್ದೆವು
ನಾವು ಮಕ್ಕಳಿಗೆ ಅಚ್ಚುಮೆಚ್ಚಾಗಿದ್ದೆವು
ನಮ್ಮನ್ನೆಲ್ಲಾ ಬಿಕ್ಶುಕರ ಆಸ್ತಿ ಅನ್ನೋ ಹಾಗೆ ಮಾಡಿದಿರಿ

ದೇವರ ಆರತಿಯ ತಟ್ಟೆ ಮೇಲೆ ಹಾಕಿ ನಾವೇ ಲಕ್ಶ್ಮಿ ಎಂದು
ದೇವರಿಗೆ ಬಿಕ್ಶೆ ಕೊಟ್ಟು ಸಂತೋಶದಿಂದ ಬೀಗಿದಿರಿ
ನಾವೇನು ಮಾಡಿದ್ದೆವು ನಿಮಗೆ?
ನಮ್ಮ ಮೇಲೇಕೆ ಇಶ್ಟು ತಾತ್ಸಾರ?

ನಮಗೂ ಕೂಡಾ ಬೆಲೆ ಇದೆ ಎಂಬುದನ್ನ ನೀವೇಕೆ ಮರೆತಿರಿ?
ನಮ್ಮ ಈ ಪರಿಸ್ತಿತಿ ನಿಮಗೂ ಒಂದು ದಿನ ಬರಬಹುದಲ್ಲಾ ಎಂದು ಏಕೆ ಯೋಚಿಸಲಿಲ್ಲಾ?
ನಾವ್ ಯಾರು ಅಂತ ಇನ್ನೂ ನಿಮಗೆ ತಿಳಿಯಲಿಲ್ಲವೇ?
ಇಶ್ಟು ಬೇಗ ನಮ್ಮನ್ನ ಮರೆತೆರೆ?

ನಾವುಗಳೇ ನಿಮ್ಮ ಬಾಲ್ಯದ ಅಚ್ಚುಮೆಚ್ಚಿನ
ಐದು ಪೈಸೆ, ಹತ್ತು ಪೈಸೆ, ಇಪ್ಪತ್ತು ಪೈಸೆ, ನಾಲ್ಕಾಣೆ, ಎಂಟಾಣೆ
ಈಗ ನೀವುಗಳ್ಯಾರು ಎಂದು ಯೋಚಿಸಿ 🙂

(ಚಿತ್ರ ಸೆಲೆ: thehindu.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: