ಅಪ್ಪಾ… ಬಾ ಮತ್ತೆ ಮಗುವಾಗು

– ಸಿಂದು ಬಾರ‍್ಗವ್.

Fatherhood story June 12,  2009 Photography by Mark A. Philbrick Copyright BYU Photo 2009 All Rights Reserved photo@byu.edu  (801)422-7322

ಅಪ್ಪ, ಮಗುವಾಗಿದೆಯಲ್ಲವೇ ನಿನ್ನ ಮನಸ್ಸೀಗ
ನಾನೂ ಮಗುವೇ ಇನ್ನು ನಿನಗೀಗ

ನನ್ನ ಕಣ್ಣಲ್ಲಿ ಕಣ್ಣೀರ ನೋಡಲು ಬಯಸದವ ನೀನು
ನಿನ್ನ ಪ್ರೀತಿಯ ತೋರಿಸಲು ಹೆಣಗಾಡಿದವ ನೀನು

ಅಶ್ಟು ದಡ್ಡಿ ನಾನಲ್ಲಪ್ಪ…
ನನ್ನ ಉಸಿರಿನಲಿ ನಿನ್ನ ಪಾಲಿದೆ
ನಿನ್ನ ರಕುತ ನನ್ನಲ್ಲೂ ಹರಿಯುತಿದೆ

ಕೆಟ್ಟ ದುನಿಯವಿದು ಅಪ್ಪ
ನೀ ಗಿಣಿಯಂತೆ ಸಾಕಿದ್ದೆ
ನಾ ಹಾರಾಡಲು ಬಯಸಿದ್ದೆ
ಕಶ್ಟ ಕಂಡೆ, ನೋವನುಂಡೆ
ನಿನ್ನಲ್ಲಿ ಹೇಳಲು ಬಯಗೊಂಡೆ

ನಿನ್ನ ಮಾನ, ಸಮ್ಮಾನ ನನ್ನ ಕೈಯಲ್ಲಿದೆ ಅಪ್ಪ
ಮದುವೆ ಆಯ್ತು ಹೊಸದಾದ ಮನೆಯ ದೀಪ ಬೆಳಗಿದೆ

ನಾವು ಹುಟ್ಟಿದಾಗ ನಿನಗೆ ಜವಾಬ್ದಾರಿ ಜಾಸ್ತಿ ಇತ್ತು
ಹಗಲು ರಾತ್ರಿಯ ಲೆಕ್ಕ ತಪ್ಪುತ್ತಿತ್ತು

ಕಂದಮ್ಮಗಳ ದಿನಕ್ಕೆ ಒಮ್ಮೆ
ನೋಡುವುದೂ ಕಶ್ಟವಾಗುತ್ತಿತ್ತು
ಒಳಗೊಳಗೆ ಅಳುತಲಿದ್ದ
ಆ ಮೊಗವೀಗ ಕಣ್ಣೆದುರು ಬಂತು

ಅರಿಯುವೆನು ಪಿತನೇ…
ನಿನ್ನ ಪ್ರೀತಿಯ ನಿನ್ನ ಕಂಗಳಲ್ಲೇ ನಾ ನೋಡಿದ್ದೆ
ನಿನ್ನ ಕಾಳಜಿಯನ್ನು ತಾಯಿಯಲ್ಲಿ ನೋಡಿದ್ದೆ

ನನಗೂ ನೂರಾರು ಕನಸುಗಳ
ಕಟ್ಟಿಕೊಳ್ಳಲು ಹಾದಿತೋರಿಸಿದೆ
ಇಳಿವಯಸ್ಸು, ಮಗುವಿನ ಮನಸ್ಸು
ವಿಶ್ರಾಂತಿ ಬೇಕಪ್ಪಾ

ಸ್ವಲ್ಪ ಬಾ ಇಲ್ಲಿ ಕುಳಿತುಕೋ…
ನನ್ನ ಮಗನ ಜೊತೆ ಹರಟೆ ಹೊಡಿ
ಆಟವಾಡು ಮತ್ತೆ ಮಗುವಾಗು
ಮುಸ್ಸಂಜೆ ಹೊಂಗಿರಣ ಮನಕ್ಕಿಳಿದಿದೆ ತಾನೆ

ಅಶ್ಟೇ ಸಾಕು…
ಇನ್ನೇನು ನಾನಿನಗೆ ಕೊಡಲು ಸಾದ್ಯ?
ನಿನ್ನ ನೆಮ್ಮದಿಯ ನಗುಮುಕ ನೋಡುವುದೇ ನನ್ನ ಬಾಗ್ಯ

(ಚಿತ್ರ ಸೆಲೆ: www.aeee.gr)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: