ಬರೀ ಇನ್ನೂರಕ್ಕೆ ಕಾರು ಹೊಸದಾಗಿಸಿ: ಬಾಗ-2

ಜಯತೀರ‍್ತ ನಾಡಗವ್ಡ.

2

ಈ ಹಿಂದೆ ಬರೀ ಇನ್ನೂರಕ್ಕೆ ಕಾರು ಹೊಸದಾಗಿಸಿ ಎಂಬ ಬರಹ ಮೂಡಿ ಬಂದಿತ್ತು. ಈ ಬರಹ ಅದರ ಮುಂದುವರಿದ ಬಾಗವಿದ್ದು, ಸುಮಾರು 200 ರ ಬೆಲೆಯಲ್ಲಿ ಸಿಗುವ ಇತರೆ ತಾನೋಡದ ಬಿಡಿಬಾಗಗಳ ಬಗ್ಗೆ ತಿಳಿಯೋಣ ಬನ್ನಿ.

ಅಲೆಯುಲಿ/ಚೂಟಿಯುಲಿ ಸೇರುವೆ (Mobile Holder):

mobile-holder

ಇಂದಿನ ದಿನಗಳಲ್ಲಿ ನಮ್ಮ ಅಲೆಯುಲಿಯೇ ನಮಗೆಲ್ಲ ಎನ್ನುವಂತಿದೆ. ಬರೀ ಮಾತನಾಡಲು ಅಲ್ಲದೇ ಅಲೆಯುಲಿಗಳು ಚೂಟಿಯಾಗುತ್ತಾ ಸಾಗಿ ಹಲವಾರು ರೀತಿಯಲ್ಲಿ ನಮ್ಮ ನೆರವಿಗೆ ಬರುತ್ತಿವೆ. ಇಂದು, ಎಶ್ಟೋ ಬಂಡಿ ಓಡಿಸುಗರು ತಮ್ಮ ಚೂಟಿಯುಲಿಗಳಲ್ಲಿರುವ ತಲುಪುದಾರಿ ಏರ‍್ಪಾಟು(Navigation) ಬಳಸಿ ತಾವು ತಲುಪಬೇಕಾದ ಊರು, ಜಾಗ ಸೇರಿಕೊಳ್ಳುತ್ತಿದ್ದಾರೆ. ಹೀಗೆ ಚೂಟಿಯುಲಿಯಲ್ಲಿನ ತಲುಪುದಾರಿ ಏರ‍್ಪಾಟನ್ನು ಪದೇ ಪದೇ ನೋಡುತ್ತ ಓಡಿಸಲಾಗದು. ಅದು ಓಡಿಸುಗನ ಕಣ್ಮುಂದೆ ಇಲ್ಲವೇ ಓಡಿಸುಗನಿಗೆ ಸುಳುವಾಗಿ ಕಾಣುವಂತಿದ್ದರೆ ಒಳ್ಳೆಯದು. ಇದನ್ನು ಓಡಿಸುಗನಿಗೆ ಕಾಣುವಂತೆ ಇಡಲು, ಅಲೆಯುಲಿ ಸೇರುವೆಗಳನ್ನು(Mobile Holder) ಬಳಸಬಹುದು. ಅಲೆಯುಲಿ ಸೇರುವೆಗಳನ್ನು ಓಡಿಸುಗನ ಮುಂಬಾಗದ ಗಾಳಿತಡೆಯ(Wind Shield) ಗಾಜಿನ ಮೇಲೆ ಅಂಟಿಸಿ, ಈ ಸೇರುವೆಯಲ್ಲಿ ಅಲೆಯುಲಿಯನ್ನು ಬದ್ರವಾಗಿ ಸೇರಿಸಿಟ್ಟು ಬಳಸಿಕೊಳ್ಳಬಹುದು. ತಲಪುದಾರಿ ಏರ‍್ಪಾಟು ಬಳಸದ ಓಡಿಸುಗರು ಕೂಡ ಈ ಅಲೆಯುಲಿ ಸೇರುವೆಗಳನ್ನು ಬಳಸಬಹುದು. 100 ರೂಪಾಯಿಗಳ ಆರಂಬಿಕ ಬೆಲೆಯಲ್ಲಿ ಸಿಗುವ ಈ ಸೇರುವೆಗಳು ಹಲವು ಆಕಾರ, ಗಾತ್ರದಲ್ಲಿ ಸಿಗುತ್ತವೆ.

USB ತುಂಬುಕ (USB charger):

usb-charger

ಹೆಚ್ಚಿನ ಬಂಡಿಗಳಲ್ಲಿ USB ತುಂಬುಕಗಳನ್ನು ಸಿಕ್ಕಿಸುವ ಕಿಂಡಿಯೊಂದನು ನೀಡಿರುತ್ತಾರೆ. ಇಲ್ಲಿ USB ತುಂಬುಕಗಳನ್ನು ಸಿಕ್ಕಿಸಿ,  USB ಎಳೆಯ ಮೂಲಕ ಪಯಣಿಗರ ಎಣ್ಣುಕ, ಅಲೆಯುಲಿ ಮುಂತಾದವುಗಳಲ್ಲಿ ಹುರುಪು(Charge) ತುಂಬಿಸಬಹುದು. USB ತುಂಬುಕಗಳು ಸುಮಾರು 150 ರೂಪಾಯಿಗಳಲ್ಲಿ ಸಿಗುತ್ತವೆ. ಪುಟಾಣಿ USB ತುಂಬುಕವೊಂದನ್ನು ನಿಮ್ಮ ಬಂಡಿಯಲ್ಲಿಟ್ಟುಕೊಂಡಿದ್ದರೆ, ಅದು ಕೆಲಸಕ್ಕೆ ಬರುತ್ತದೆ.

ಬೆನ್ನೂರುಕ(Back Rest):

back-rest

ಹೆಚ್ಚು ಹೊತ್ತು ಬಂಡಿ ಓಡಿಸುವವರು ಮತ್ತು ಪಯಣಿಗರು ಹೆಚ್ಚಾಗಿ ಬೆನ್ನು ನೋವಿನ ಬಗ್ಗೆ ದೂರುವುದು ಸಾಮಾನ್ಯ. ಇದರಿಂದ ಹೊರಬರಲು ಬೆನ್ನೂರುಕಗಳನ್ನು ಬಳಸಬಹುದು. ಬಂಡಿ ಓಡಿಸುಗರು, ಪಯಣಿಗರು ಇವುಗಳನ್ನು ಬೆನ್ನಿಗೆ ಆಸರೆಯಾಗಿ ಇಟ್ಟುಕೊಂಡು ಆರಾಮಾಗಿ ಸಾಗಬಹುದು. 180ರಿಂದ 400 ರೂಪಾಯಿಗಳವರೆಗೆ ಇವುಗಳನ್ನು ಕೊಳ್ಳಬಹುದು. ನೀವು ದಿನಾಲು ಹೆಚ್ಚು ಹೊತ್ತು ಬಂಡಿಯಲ್ಲಿ ಸಾಗುವವರಾಗಿದ್ದರೆ ಬೆನ್ನೂರುಕವೊಂದನ್ನು ಬಳಸಬಹುದು.

ನೆರಳು ಹೊದಿಕೆ/ಪರದೆ (Car Sun Shade Cover):

car-sunshades

ಬಿಸಿಲಲ್ಲಿ ಬಂಡಿಯೋಡಿಸುವುದು ಬಲು ಕಶ್ಟ. ಬಂಡಿಯೋಡಿಸುಗರಿಗೆ ನೇಸರನ ಬಿಸಿಲು ಕಣ್ಣು ಕುಕ್ಕದಂತೆ ಕಾರುಗಳಲ್ಲಿ ನೆರಳು ಪಟ್ಟಿಯನ್ನು(Sun Visor) ನೀಡಿರುತ್ತಾರೆ. ಆದರೆ, ಎಶ್ಟೋ ಸಾರಿ ನೇಸರನ ಕದಿರುಗಳು ಬಂಡಿಯ ಅಕ್ಕ ಪಕ್ಕದ ಬದಿಯಿಂದ, ಬಂಡಿಯ ಗಾಜಿನ ಮೂಲಕ ಹಾದು ಪಯಣಿಗರನ್ನು ಬಿಸಿಗೊಳಿಸುತ್ತ ಕಿರಿ ಕಿರಿ ಉಂಟು ಮಾಡುವುದು ನೋಡಿರಬಹುದು ಇಲ್ಲವೇ ಅನುಬವಿಸರಲೂಬಹುದು. ಈ ಕಿರಿ ಕಿರಿಯಿಂದ ಪಾರಾಗಲು ನೆರಳು ಹೊದಿಕೆಗಳನ್ನು ಬಳಸಬಹುದು. ಕೇವಲ 100 ರೂಪಾಯಿಗಳ ಅಗ್ಗದ ಬೆಲೆಗೆ 4 ನೆರಳು ಹೊದಿಕೆ/ಪರದೆಗಳನ್ನು ಕೊಳ್ಳಬಹುದು. ಈ ಪರದೆಗಳನ್ನು ಬಂಡಿಯ ನಾಲ್ಕು ಬದಿಯ ಬಾಗಿಲಿನ ಗಾಜಿಗೆ ಅಂಟಿಸಿದರೆ ಆಯಿತು. ಇದು ನೇಸರನ ಕದಿರುಗಳನ್ನು ತಡೆಯುತ್ತದೆ.

ಗೀರುಗಳನ್ನು ಮರೆಮಾಚುವ ಪೆನ್ (Scratch Remover pen):

scratch-remover-pen

ಹಿಂದಿನ ಬರಹದಲ್ಲೊಮ್ಮೆ ಹೇಳಿದಂತೆ ಕಚ್ಚು, ಗೀರುಗಳು ನಮ್ಮ ಬಂಡಿಯ ಅಂದಗೆಡಿಸಿ ಬೇಜಾರು ತರಿಸುತ್ತವೆ. ಈ ಗೀರು, ಕಚ್ಚು ಮರೆಮಾಚುವ ಪೆನ್‌ಗಳು ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಪೆನ್ ಅನ್ನು ಕಚ್ಚು, ಗೀರು ಮೂಡಿರುವ ಜಾಗದಲ್ಲಿ ಮೆಲ್ಲಗೆ ತೀಡಬೇಕು. ತೀಡುವಾಗ ಪೆನ್ ಹೆಚ್ಚು ಬಣ್ಣ ಹೊರಹಾಕಿ ಕಚ್ಚಿನ ಅಕ್ಕ ಪಕ್ಕವೂ ಹಬ್ಬಿದರೆ, ಕೂಡಲೇ ಅದನ್ನು ಬಟ್ಟೆಯಿಂದ ಒರೆಸಿ ತೆಗೆದುಬಿಡಿ. 150 ರೂಪಾಯಿ ಬೆಲೆಯ ಈ ಪೆನ್ನುಗಳನ್ನು ಚಿಕ್ಕ ಗೀರು, ಕಚ್ಚುಗಳನ್ನು ತೆಗೆದು ಹಾಕಲು ಬಳಸಿ. ದೊಡ್ಡದಾದ ಕಚ್ಚುಗಳಿದ್ದರೆ ನುರಿತ ಮೆಕ್ಯಾನಿಕ್ ಇಲ್ಲವೇ ಬಂಡಿಯ ನೆರವುದಾಣಗಳಿಗೆ ತೆರಳಿ ಸರಿಪಡಿಸಿಕೊಳ್ಳುವುದು ಒಳ್ಳೆಯದು.

ತಿಗುರಿಯ ಹೊದಿಕೆ(Steering wheel cover):

steering-cover

ಬಂಡಿ ಓಡಿಸುವಾಗ ನಮ್ಮ ಎರಡು ಕೈಗಳು ತಿಗುರಿ(Steering wheel) ಮೇಲಿಟ್ಟುಕೊಂಡಿರಬೇಕು. ಇದರಿಂದ ತಿಗುರಿ ಹಾಗೂ ಬಂಡಿಯ ಮೇಲೆ ಒಳ್ಳೆಯ ಹಿಡಿತವಿರುತ್ತದೆ. ಇಂದಿನ ದಿನಗಳಲ್ಲಿ, ಸುತ್ತಲಿನ ವಾತಾವರಣದ ಕಸ, ಕಡ್ಡಿ, ದೂಳುಗಳಿಂದ ದೂರವಿರುವುದು ಕಶ್ಟ ಸಾದ್ಯ. ಎಶ್ಟೋ ಸಾರಿ ಈ ಕಸ, ದೂಳುಗಳು  ಗಾಳಿಯಿಂದ ತಿಗುರಿಗೆ ಮೆತ್ತಿಕೊಳ್ಳುವುದೂ ಉಂಟು. ಅಲ್ಲದೇ ಓಡಿಸುಗನ ಕೈ ಮೂಲಕ ದೂಳು, ಬೆವರು ಸೇರಿ ತಿಗುರಿಯ ಮೇಲಿನ ಪಟ್ಟು ಸಡಿಲಗೊಳ್ಳುವುದು. ತಿಗುರಿಯ ಮೇಲಿನ ಪಟ್ಟು ಬಿಗಿಗೊಳಿಸಲು(Grip) ತಿಗುರಿಯ ಹೊದಿಕೆಯೊಂದರಿಂದ ಅದನ್ನು ಮುಚ್ಚಬೇಕು. ಇದರಿಂದ ತಿಗುರಿಯ ಸವೆತದಿಂದಲೂ ಕಾಪಾಡಬಹುದು. ತೊಗಲು, ರಬ್ಬರ್, ಅರೆದೊಗಲಿನ ವಸ್ತುಗಳಿಂದ ಮಾಡಲ್ಪಟ್ಟ ತಿಗುರಿ ಹೊದಿಕೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಓಡಿಸುಗರ ಇಶ್ಟದಂತೆ ತೊಗಲು, ರಬ್ಬರ್‌ನ ತಿಗುರಿ ಹೊದಿಕೆಗಳನ್ನು ಕರೀದಿಸಬಹುದಾಗಿದ್ದು, ಇವುಗಳ ಆರಂಬಿಕ ಬೆಲೆ 150 ರೂಪಾಯಿಗಳು.

ಬಂಡಿಯ ಬಗೆ, ಆಕಾರ, ಗಾತ್ರಕ್ಕೆ ತಕ್ಕಂತೆ ಈ ಮೇಲಿನ ಎಲ್ಲ ವಸ್ತುಗಳ ಬೆಲೆಗಳು ಆಗಾಗ ಹೆಚ್ಚು ಕಡಿಮೆಯಾಗುವ ಸಾದ್ಯತೆ ಹೆಚ್ಚು. ನಿಮಗೆ ಕೊಳ್ಳಲು ಆಸಕ್ತಿಯಿದ್ದರೆ ವಿವಿದ ಮಿನ್ಕೊಳುಕೊಡೆಗಳಲ್ಲಿ(E-commerce site), ನಿಮ್ಮ ಹತ್ತಿರದ ಬಿಡಿಬಾಗಗಳ ಅಂಗಡಿಗಳಲ್ಲಿ ದರಗಳನ್ನು ಹೋಲಿಸಿ ನೋಡಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: snapdeal.comikuzocaraccessories.com)Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s