ಕೂಗ್ಯಾಳ ಗೆಳತಿ ಬೆಳದಿಂಗಳ ದನಿಯಾಗ
1. ಹರೆಯದ ಹೂವಿಗೆ ಹರುಶದಿ ಹೆಸರಿಟ್ಟವಳು
ಸ್ತಗಿತವಾದ ದಡಕೆ ಅಲೆಯಾಗಿ ಬಂದವಳು
ಅಲೆಮಾರಿ ರವಿಗೆ ಮೂಡಣ ತೋರಿಸಿದವಳು
ತಡವಿಲ್ಲದೆ ನನ್ನಲಿ ಗ್ರುಹಪ್ರವೇಶ ಮಾಡಿದಳು
ಬಿಡುವಿಲ್ಲದ ಮನಸ್ಸಿನ ಅಂಗಳವ ತೊರೆದಳು
ಪೂರ‍್ಣವಿರಾಮ ಇಡಲು ಮರೆಯದೆ ಹೋದಳು
2. ಕೂಗ್ಯಾಳ ಗೆಳತಿ ಬೆಳದಿಂಗಳ ದನಿಯಾಗ
ನನಗಶ್ಟೇ ಕೇಳಸೂ ಬಗೆಯಾಗ
ಗಾಳಿಯ ಸೆರಗದಾಗ ಸಿಕ್ಕಾಗ
ಅವಳ ತುಸುಮಾತು
ತೂರಾಡಿ ಹಾರಿ ಪತಂಗವಾತು
3. ಮಲ್ಲಿಗೆ ಬೇಕೇನು ಹೇಳು
ಸಮುದ್ರ ಸೊರಗಿಸಿ ಬೆಳೆವೆ
ಮೆಲ್ಲನೆ ಬರಬೇಕೆ ಹೇಳು
ಆಕಾಶದಂತೆ ಸಾವರಿಸಿ ಬರುವೆ
ಏನಾದರೊಂದು ಬೇಗ ಹೇಳು
ಸಮಯ ಕಾಯೋದು ಯಾರಿಗೆ?
4. ನೆಪಮಾಡಿ ಬಂದೇತಿ ಚಂದ
ನಶೆ ಬಾಳ ಆಗೇತಿ ಅಂದ
ನೆರಳೀಗ ಬಿಳಿಯಾತು ನಿಂದ
ನೆರವಾಗಿ ನಾ ಬಳಿ ಬಂದಾಗಿನಿಂದ
(ಚಿತ್ರ ಸೆಲೆ: wallarthd.com )
ಇತ್ತೀಚಿನ ಅನಿಸಿಕೆಗಳು