ಹಣೆಬರಹವ ಬರೆಯುವಂತಿದ್ದರೆ
– ಸುರಬಿ ಲತಾ.
ಬರಹವು ಬರೆದೆವು ಕಾಗದದಲಿ
ಬರೆಯುವಂತಿದ್ದರೆ ಹಣೆಯಲಿ
ಮನಗಳು ನಲಿಯುತ್ತಿದ್ದವು ಸಂತಸದಲಿ
ಹತಾಶೆ ನೋವುಗಳು ಇರುತ್ತಿರಲಿಲ್ಲ ಬಾಳಿನಲಿ
ಹಸಿರಂತೆ ಹರಡುತ್ತಿತ್ತು ನೆಮ್ಮದಿ ಜಗದಲಿ
ಬಡತನವೇ ಕಾಣುತ್ತಿರಲಿಲ್ಲ ಜನರಲಿ
ಮೇಲು ಕೀಳೆಂಬುದು ಮರೆಯಾಗುತ್ತಿತ್ತು
ಗಂಡು ಹೆಣ್ಣಿನ ಮದ್ಯೆ ಸಮವಾಗುತ್ತಿತ್ತು
ಒಂದೇ ಎಲ್ಲರೂ ಎಂಬ ಬಾವ ಮೂಡುತ್ತಿತ್ತು
ಸ್ವರ‍್ಣಮಯ ಲೋಕವಾಗುತ್ತಿತ್ತು
ಮಾನವ ದಾನವರ ಮನ ಒಂದಾಗುತ್ತಿತ್ತು
ಸ್ವಾರ‍್ತ ವು ಕಣ್ಮರೆ ಯಾಗುತ್ತಿತ್ತು
(ಚಿತ್ರ ಸೆಲೆ: kalw.org)
ಇತ್ತೀಚಿನ ಅನಿಸಿಕೆಗಳು