ಯಾರೇ ನೀ ಸ್ವಪ್ನ ಸುಂದರಿ

– ಚೇತನ್ ಪಟೇಲ್.


ಕವಿಯಾದೆ ನಾ ನವಿರಾದ ಕವಿತೆ ಬರೆದು
ಪದವಾದೆ ನೀ ಸವಿಯಾದ ನೆನಪ ನೆನೆದು
ಮುಸುಕಿನ ಮುನ್ನುಡಿ ನಿನ್ ಹೆಸರಿನ ಕೈಪಿಡಿ
ಸ್ವಾರಸ್ಯವೇನೂ ಕೇಳು ಸಾರಾಂಶ ನಿನ್ ಹೊರತು ಬೇರೇನೂ
ಸ್ವಾಬಿಮಾನಿ ಈ ಮನಸಿನಲ್ಲಿ ಸರ‍್ವಾಂತಾರ‍್ಯಾಮಿ ನೀನು

ಕವಲು ದಾರಿಯಲಿ ಕಣ್ಮುಚ್ಚಿ ನಡೆದೇ
ಸವಿಯಾದ ಸರಿದಾರಿ ನಿನ್ನೆಡೆಗೆ ಸೆಳೆದಂತಿದೆ
ಸಾವಿರಾರು ಹೆಜ್ಜೆಗಳು ನಾಲ್ಕಾರು ತಿರುವುಗಳು
ಸುಡುವ ಬಿಸಿಲಿನಲ್ಲಿ ತಂಪಾದ ನಿನ್ನ ನೆನಪುಗಳು
ಕಾಣಬೇಕೆಂಬ ಕಾತರಿಕೆ ನೀ ಎದುರಾಗಬೇಕೆಂಬ ಬಯಕೆ

ಕನಸಲು ನಿನ್ನದೇ ಕನವರಿಕೆ ಶುರುವಾಗಿದೆ
ಹಗಲಲು ನಿನ್ನದೇ ಚಿಂತೆ ಹೆಗಲೇರಿ ಕುಳಿತಿದೆ
ಒಲವೊಮ್ಮೆ ನನ್ನನು ಕೈಬೀಸಿ ಕರೆದಾಗಿದೆ
ಎದೆಯಲಿ ಪ್ರೀತಿಯ ಒಡಂಬಡಿಕೆ ಹೆಚ್ಚಾಗಿದೆ
ಕಾಡುವ ಕನಸಿನ ಚೆಲುವೆ ಬಾರೆ ಕಣ್ಣೆದುರಿಗೆ

ಬಂದು ಆದೆ ನೀ ನನಗೆ ಬಂದುಹೋದ ದಿನದಿಂದಲೇ
ಪ್ರೀತಿಯ ಬೇಡಿಯಲಿ ಬಂದಿ ನಾ ನಿನ್ನ ಕಂಡಾಗಲೇ
ಸೆರೆಯಾದೆನಾ ಆ ಮನಸಲಿ, ಹಿತ ತಂದೆ ನೀ ಕ್ಶಣದಲಿ
ತಿಳಿಯಾದ ಮನದ ಕೊಳದಲ್ಲಿ ತಲ್ಲಣ ನಿನ್ನಿಂದಲೇ
ನೀ ಯಾರೇ ಸುಂದರಿ ಸ್ವಪ್ನದ ರೂವಾರಿ

( ಚಿತ್ರ ಸೆಲೆ: moviewriternyu.files.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Ramya N says:

    ಚೆನ್ನಾಗಿದೆ ಕವನ

ಅನಿಸಿಕೆ ಬರೆಯಿರಿ: