ಕಾಯಕವೇ ಕೈಲಾಸವೆನ್ನುವ ‘ಕಾರ‍್ಮಿಕ’

– ಸುರಬಿ ಲತಾ.

ಹಗಲೆನ್ನದೆ ಇರುಳೆನ್ನದೆ ದುಡಿದೆ
ಕಾಯಕವೇ ಕೈಲಾಸವೆಂದೆ
ನೀನಿಲ್ಲದೆ ನಡೆಯದು ಲೋಕ ಮುಂದೆ
ಸಣ್ಣ ಪುಟ್ಟ ಕೆಲಸಕ್ಕೂ ನೀನೇ ಬೇಕೆಂದೆ

ಹಗಲಾವುದು ಇರುಳಾವುದು
ಬಿಸಿಲಾವುದು ಮಳೆ ಆವುದು
ಕರ‍್ತವ್ಯವೇ ದೇವರೆಂದೆ
ನಿನ್ನ ನೆನೆಯಲು ಈ ಸಮಯ ಒಂದೇ

ದಿನಾ ಮಾಡುವ ನಿನ್ನ ಕಾಯಕಕ್ಕೆ
ದಿನಾಚರಣೆ ಒಂದು ದಿನಕ್ಕೆ
ನೆನೆಯಬೇಕು ದಿನವೂ ಎಲ್ಲರೂ
ದುಡಿಯುವುದರಲ್ಲಿ ನೀವು ಮಲ್ಲರು

ನಿಮಗಿದೋ ನನ್ನ ನಮನಗಳು

(ಚಿತ್ರ ಸೆಲೆ: freegreatpicture.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.