ಹೊಸಬಗೆಯ ಇಡ್ಲಿ: ಅವಲಕ್ಕಿ ಇಡ್ಲಿ

– ಸವಿತಾ.

ಬೇಕಾಗುವ ಪದಾರ‍್ತಗಳು:

  • 1 ಲೋಟ – ಅವಲಕ್ಕಿ ( ದಪ್ಪ/ತೆಳು)
  • 1 1/2 ಲೋಟ – ಇಡ್ಲಿ ರವೆ
  • 3 ಸಣ್ಣ ಚಮಚ – ಮೊಸರು
  • 1/2 ಲೋಟ – ನೀರು
  • 1/2 ಚಮಚ – ಉಪ್ಪು
  • ಸ್ವಲ್ಪ ಅಡುಗೆ ಸೋಡಾ

 

ಮಾಡುವ ಬಗೆ:

  • ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ
  • ಇಡ್ಲಿ ರವೆ ಚೆನ್ನಾಗಿ ತೊಳೆದು, ಅವಲಕ್ಕಿ ಮತ್ತು ರವೆ – ಎರಡನ್ನು ಸೇರಿಸಿ ಒಂದು ಪಾತ್ರೆಯಲ್ಲಿ 10 ನಿಮಿಶ ಇಡಿ.
  • ಆಮೇಲೆ ಈ ಮಿಶ್ರಣಕ್ಕೆ ಮೊಸರು, ನೀರು, ಉಪ್ಪು, ಅಡುಗೆ ಸೋಡಾ ಬೆರೆಸಿ ಚೆನ್ನಾಗಿ ಕಲಸಿ ಇಡಿ.
  • ಇಡ್ಲಿ ಬಟ್ಟಲಿಗೆ ಎಣ್ಣೆ ಹಚ್ಚಿ ಇಡ್ಲಿಯಂತೆ 10 ನಿಮಿಶ ಇಡ್ಲಿ ಪಾತ್ರೆಯಲ್ಲಿ ಬೇಯಿಸಿರಿ.
  • ಅವಲಕ್ಕಿ ಇಡ್ಲಿ ಈಗ ತಯಾರು
  • ಚಟ್ನಿಯ ಜೊತೆ ಅವಲಕ್ಕಿ ಇಡ್ಲಿ ಸವಿಯಿರಿ

 

(ಚಿತ್ರ ಸೆಲೆ: ಸವಿತಾ )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *